ಹಾಸ್ಟೆಲ್‌ನಲ್ಲಿ ರ‍್ಯಾಗಿಂಗ್, ಯುವಕನಿಗೆ ಹೊಡೆದು, ಐರನ್ ಬಾಕ್ಸ್‌ನಿಂದ ಸುಟ್ಟ ಸೀನಿಯರ‍್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜ್ಯೂನಿಯರ‍್ಸ್‌ಗೆ ಸಣ್ಣಪುಟ್ಟ ರ‍್ಯಾಗಿಂಗ್ ಮಾಡೋದು ಎಲ್ಲ ಕಾಲೇಜುಗಳಲ್ಲಿ ಮಾಮೂಲಿ. ಆದರೆ ಅದೇ ಅತಿರೇಕಕ್ಕೆ ಹೋದರೆ ಮಕ್ಕಳನ್ನು ಕಾಲೇಜಿಗೆ ಕಳುಹಿಸೋಕೆ ಪೋಷಕರು ಹಿಂದುಮುಂದು ನೋಡುವಂತಾಗುತ್ತದೆ.

ಆಂಧ್ರದ ಭೀಮಾವರಂನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರ‍್ಯಾಗಿಂಗ್ ಅತಿಯಾಗಿದ್ದು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಯುವಕನನ್ನು ಥಳಿಸಿದ್ದಾರೆ. ಐರನ್ ಬಾಕ್ಸ್‌ನಿಂದ ಮೈ ಕೈ ಸುಟ್ಟಿದ್ದಾರೆ. ಒಬ್ಬ ವಿದ್ಯಾರ್ಥಿ ಇದರ ವಿಡಿಯೋ ಮಾಡಿದ್ದು, ಇದೀಗ ವಿಡಿಯೋ ಅವರ ಪಾಲಿಗೆ ಮುಳುವಾಗಿದೆ.

ಯುವಕ ಕ್ಷಮೆಯಾಚಿಸಿದರೂ ಬಿಡದ ಸೀನಿಯರ‍್ಸ್ ಕೋಲಿನಿಂದ ಬಾರಿಸಿದ್ದಾರೆ. ಕ್ಷಮಿಸಿ ಎಂದು ಕೂಗಿದ್ದರೂ ಬಟ್ಟೆ ತೆಗೆದು ಐರನ್ ಬಾಕ್ಸ್‌ನಿಂದ ಸುಟ್ಟಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!