ಮಗಳ ನಿರ್ದೇಶನದ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಜನಿಕಾಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಮತ್ತೊಮ್ಮೆ ನಿರ್ದೇಶನದ ಹಾದಿ ತುಳಿದಿದ್ದಾರೆ. ತಮಿಳು ನಿರ್ಮಾಣದ ಲೈಕಾ ಪ್ರೊಡಕ್ಷನ್‌ನ ಬ್ಯಾನರ್‌ನಡಿಯಲ್ಲಿ ಐಶ್ವರ್ಯಾ ನಿರ್ದೇಶಕರಾಗಿ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ತಮಿಳು ನಾಯಕರಾದ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಈ ಚಿತ್ರದ ನಾಯಕರು. ‘ಲಾಲ್ ಸಲಾಂ’ ಶೀರ್ಷಿಕೆಯೊಂದಿಗೆ ಈ ಸಿನಿಮಾ ಬರಲಿದೆ. ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ನೋಡಿದರೆ, ಈ ಸಿನಿಮಾ ಕ್ರಿಕೆಟ್ ಮತ್ತು ಕ್ರಿಕೆಟ್ ಸಂಬಂಧಿತ ಫೈಟ್‌ಗಳ ಮೇಲೆ ಇರಲಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಶೀರ್ಷಿಕೆಯೇ ಮಾತ್ರ ಬೇರೆ ಇದೆ ಇವೆರಡರ ನಡುವಿನ ವ್ಯತ್ಯಾದ ಸಿನಿಮಾದ ಮೇಲಿನ ಆಸಕ್ತಿಯನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ವಿಷಯ ಕೇಳುತ್ತಿದ್ದಂತೆ ರಜನಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ತಮ್ಮ ಕಿರಿಯ ಮಗಳ ನಿರ್ದೇಶನದಲ್ಲಿ ಸಿನಿಮಾ ಮಾಡಿದ್ದ ರಜನಿಕಾಂತ್ ಈಗ ತಮ್ಮ ಹಿರಿಯ ಮಗಳ ನಿರ್ದೇಶನದ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!