ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಸದಗಯ ಕಮಾಂಡೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಆಕಸ್ಮಿಕವಾಗಿ ಎಡಗೈಗೆ ಗಾಯವಾಗಿದೆ. ಕೂಡಲೇ ಚಿತ್ರೀಕರಣ ನಿಲ್ಲಿಸಿದ ಚಿತ್ರತಂಡ ಆಕೆಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ಎಡಗೈಗೆ ಬ್ಯಾಂಡೇಜ್ ಹಾಕಿ ಡಿಸ್ಚಾರ್ಜ್ ಮಾಡಿ ಕೆಲವು ದಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಹೇಳಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ.
ಈ ಕುರಿತು ಗಾಯಗೊಂಡ ಎಡಗೈ ಸೆಲ್ಫಿ ತೆಗೆದು ರಾಗಿಣಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ನಿಮ್ಮ ದೇಹ ಯಾವುದನ್ನಾದರೂ ತಡೆದುಕೊಳ್ಳುವ ಶಕ್ತಿಯಿರುತ್ತದೆ ಆದರೆ ಅದನ್ನು ಮನವರಿಕೆ ಮಾಡಿಕೊಡಬೇಕಾದ್ದು ನಿಮ್ಮ ಮನಸ್ಸಿಗೆ. ಯಾವಾಗಲೂ ನಗುತ್ತಲೇ ಇರಿ, ನಾನು ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹಿಂತಿರುಗುತ್ತೇನೆ. ಎಂದು ಶೀರ್ಷಿಕೆ ನೀಡಿದ್ದಾರೆ. ರಾಗಿಣಿ ಶೀಘ್ರ ಗುಣಮುಖರಾಗಲಿ ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.