ಟೀಂ ಇಂಡಿಯಾ ಕೋಚ್‌ ದ್ರಾವಿಡ್‌ಗೆ ಕೊರೋನಾ: ಏಷ್ಯಾ ಕಪ್ ನಲ್ಲಿ ಭಾಗಿಯಾಗುವುದು ಅನುಮಾನ

ಹೊಸ ದಿಗಂತಡಿಜಿಟಲ್‌ ಡೆಸ್ಕ್‌
ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಟೀಂ ಇಂಡಿಯಾಕ್ಕೆ ಶಾಕಿಂಗ್‌ ನ್ಯೂಸ್‌ ಎದುರಾಗಿದೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಆಗಸ್ಟ್ 28ರಿಂದ ಪ್ರಾರಂಭವಾಗುವ ಟೂರ್ನಿಗೆ ತಂಡದೊಂದಿಗೆ ದುಬೈಗೆ ಪ್ರಯಾಣಿಸುವ ಸಾಧ್ಯತೆಗಳು ಕಡಿಮೆ ಎಂದು ವರದಿಯಾಗಿದೆ.
ದ್ರಾವಿಡ್  ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ ಭಾರತ ODI ತಂಡದೊಂದಿಗೆ ಪ್ರಯಾಣಿಸಿರಲಿಲ್ಲ. ದ್ರಾವಿಡ್‌ ಗೆ ಬದಲಿಯಾಗಿ ವಿವಿಎಸ್ ಲಕ್ಷ್ಮಣ್ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಜಿಂಬಾಬ್ವೆಯನ್ನು ಸೋಲಿಸಿದೆ.
ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈ  ಮೂವರು ದುಬೈನಲ್ಲಿ ಭಾರತದ ಏಷ್ಯಾ ಕಪ್ ತಂಡದೊಂದಿಗೆ ಸೇರಬೇಕಿತ್ತು. ಮಹತ್ವದ ಟೂರ್ನಿಗೆ ಮುನ್ನ ಕೋಚ್‌ ಸೋಂಕಿಗೆ ತುತ್ತಾಗಿರುವುದು ಮ್ಯಾನೇಜ್‌ ಮೆಂಟ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಭಾರತವು ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧದ ಹೈ-ವೋಲ್ಟೇಜ್ ಘರ್ಷಣೆಯೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಟಿ20 ಪಂದ್ಯಾವಳಿಗಾಗಿ ತಂಡಗಳು‌ ಈಗಾಗಗಲೇ ದುಬೈನತ್ತ ಪ್ರಯಾಣಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!