ಕಣಿಪುರ ದೇಗುಲದ ನಿವೃತ್ತ ಅರ್ಚಕರಾಗಿದ್ದ ವೇದಮೂರ್ತಿ ವಾಸುದೇವ ಅಡಿಗ ಕುಂಬಳೆ ವಿಧಿವಶ

ಹೊಸದಿಗಂತ ವರದಿ ಕಾಸರಗೋಡು:

ಕುಂಬಳೆ ಅಡಿಗರ ಮನೆತನದ ಹಿರಿಯ ಶಕ್ತಿ , ಸಮರ್ಥ ಬ್ರಹ್ಮವಾಹಕ, ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನಿವೃತ್ತ ಅರ್ಚಕ, ಕೂಟ ಬಂಧು ಕಾಸರಗೋಡು ವಲಯದ ಕುಲ ಪುರೋಹಿತರಾಗಿದ್ದ ವೇದಮೂರ್ತಿ ವಾಸುದೇವ ಅಡಿಗ ಕುಂಬಳೆ (80) ವಿಧಿವಶರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಜನಾರ್ದನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದರು.

ವಿವಿಧ ದೇಗುಲಗಳಲ್ಲಿ ಸಮರ್ಥ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸಿದ್ದ ಅವರು, ಕಣಿಪುರ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸಿದ್ದರು. ಧಾರ್ಮಿಕ ವಲಯದ ಹಿರಿಯ ಮಾರ್ಗದರ್ಶಕರಗಿದ್ದರು. ಮೃತರು ಪತ್ನಿ ಶ್ರೀದೇವಿ, ಮಕ್ಕಳಾದ ವಿದ್ಯಾಲಕ್ಷ್ಮೀ, ಪದ್ಮಪಲ್ಲವಿ, ಶಂಕರಣರಾಯಣ ಅಡಿಗ (ಯೋಗೀಶ) ಅವರನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!