ರಾಹುಲ್ ಗಾಂಧಿ ನೇಪಾಳದಲ್ಲಿ ಪಾರ್ಟಿ ಮಾಡ್ತಿದಾರೆ ಎನ್ನಲಾದ ವಿಡಿಯೊ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇಪಾಳದಲ್ಲಿ ನೈಟ್‌ ಪಾರ್ಟಿಯಲ್ಲಿ ಎಂಜಾಯ್‌ ಮಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಟ್ವಿಟರ್‌ ಖಾತೆಯೊಂದರಲ್ಲಿ ಈ ವಿಡಿಯೋ ಪೋಸ್ಟ್‌ ಆಗಿದ್ದು, ರಾತ್ರಿ ಪಾರ್ಟಿಗಳಲ್ಲಿ ಎಂಜಾಯ್‌ ಮಾಡುವ ರಾಹುಲ್‌, ಉಳಿದ ಸಮಯದಲ್ಲಿ ಪ್ರಧಾನಿ ಮೋದಿಯವರಿಗೆ ಪಾಠ ಮಾಡಲು ಯತ್ನಿಸುತ್ತಿರುತ್ತಾರೆ ಎಂದು ಬರೆಯಲಾಗಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್‌ ರಾತ್ರಿಪಾರ್ಟಿಯಲ್ಲಿ ಮಗ್ನರಾಗಿರುವ ವಿಚಾರವನ್ನು ಟೀಕಿಸಿ ಸಾಕಷ್ಟು ಟ್ವೀಟ್‌ ಗಳು ಹರಿದಾಡುತ್ತವೆ. ಜವಾಬ್ದಾರಿಯುವ ಸ್ಥಾನದಲ್ಲಿರುವ ರಾಹುಲ್‌ ಇಂತಹ ವರ್ತನೆಗಳಿಂದ ಸಮಾಜಕ್ಕೆ ಎಂತಹ ಸಂದೇಶವನ್ನು ರವಾನಿಸುತ್ತಿದ್ದಾರೆ? ಎಂದು ಹಲವರು ಕಿಡಿಕಾರಿದ್ದಾರೆ. ವಿಡಿಯೋ ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!