ರಾಹುಲ್ ಗಾಂಧಿ ಕಹಿ, ವಿಷ ತುಂಬಿದ ವ್ಯಕ್ತಿ: ಕಂಗನಾ ರಾಣಾವತ್‌ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಮತ್ತೊಮ್ಮೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.

ಹಿಂಡನ್‌ಬರ್ಗ್‌ನ ಹೊಸ ವರದಿಯಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬುಚ್‌ ಅವರು ವಿದೇಶದಲ್ಲಿ ಗೌತಮ್‌ ಅದಾನಿ ಹೊಂದಿರುವ ಕಂಪನಿಗಳಲ್ಲಿ ಪಾಲು ಹೊಂದಿದ್ದಾರೆ ಎಂದು ಆರೋಪಿಸಿದ್ದು, ಇದನ್ನು ಅನುಮೋದಿಸಿದ ರಾಹುಲ್ ಗಾಂಧಿ ವಿರುದ್ಧ ಕಂಗನಾ ವಾಗ್ದಾಳಿ ನಡೆಸಿ ‘ಅತ್ಯಂತ ಅಪಾಯಕಾರಿ ವ್ಯಕ್ತಿ’ ಎಂದು ಗುಡುಗಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಂಗನಾ ಅವರು, ‘ರಾಹುಲ್ ಗಾಂಧಿ ದೇಶವನ್ನು ಮತ್ತು ದೇಶದ ಭದ್ರತೆ ಹಾಗೂ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಕಹಿ ಮತ್ತು ವಿಷ ತುಂಬಿದ ವ್ಯಕ್ತಿ. ಪ್ರಧಾನಿಯಾಗಲು ಸಾಧ್ಯವಾಗದಿದ್ದರೆ ಈ ರಾಷ್ಟ್ರವನ್ನು ನಾಶಪಡಿಸಬೇಕು ಎನ್ನುವುದು ಅವರ ಯೋಚನೆ. ಇದೇ ಕಾರಣಕ್ಕೆ ನಮ್ಮ ಷೇರುಪೇಟೆಯನ್ನು ಗುರಿಯಾಗಿಸಿಕೊಂಡ ಹಿಂಡನ್‌ಬರ್ಗ್‌ ಅನ್ನು ಬೆಂಬಲಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಜೀವನ ಪರ್ಯಂತ ಪ್ರತಿಪಕ್ಷದಲ್ಲೇ ಕೂರಲು ಸಜ್ಜಾಗಿ ಎಂದು ರಾಹುಲ್‌ ಗಾಂಧಿಗೆ ಕರೆ ನೀಡಿದ ಕಂಗನಾ,’ ರಾಹುಲ್‌ ಗಾಂಧಿ ನೀವು ಜೀವನ ಪರ್ಯಂತ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳಬೇಕು ಮತ್ತು ಈಗಿನಂತೆ ಈ ರಾಷ್ಟ್ರದ ಜನರ ವೈಭವ, ಪ್ರಗತಿ ಮತ್ತು ರಾಷ್ಟ್ರೀಯತೆಯನ್ನು ಅನುಭವಿಸಲು ಸಜ್ಜಾಗಿ. ದೇಶದ ಜನತೆ ಎಂದಿಗೂ ನಿಮ್ಮನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳುವುದಿಲ್ಲ. ಗೌರವಕ್ಕೆ ನೀವು ಅನರ್ಹ ವ್ಯಕ್ತಿʼ’ ಎಂದು ಕಂಗನಾ ಬರೆದುಕೊಂಡಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಜೊತೆಗೆ ದೇಶದ್ರೋಹಿ, ಬ್ರಿಟಿಷ್ ಪೌರತ್ವ ಇದ್ದರೂ ಮುಚ್ಚಿಟ್ಟು ಭಾರತ ಸಂವಿಧಾನಕ್ಕೆ ಅವಮಾನ ಮಾಡಿದ ಖದೀಮ, ಭಾರತವನ್ನೇ ಲೂಟಿ ಮಾಡಿ ಭಾರತ್ ಜೋಡೋ ಹೆಸರಿನಲ್ಲಿ ಹಿಂದೂಗಳನ್ನು ಯಾಮಾರಿಸಲು ಪ್ರಯತ್ನಿಸಿದ ಮಹಾ ವಂಚಕ, ಅಂತಿಮವಾಗಿ ಕೊಳಕುಮಂಡಲ.

LEAVE A REPLY

Please enter your comment!
Please enter your name here

error: Content is protected !!