ಪಾಕ್ ಸೇನೆ 1971ರಲ್ಲಿ ಬಾಂಗ್ಲಾ ವಿರುದ್ಧ ಸೋತು ಶರಣಾದ ಕ್ಷಣ ನೆನಪಿಸುವ ಪ್ರತಿಮೆಯನ್ನು ಹೊಡೆದುರುಳಿಸಿದ ದುಷ್ಕರ್ಮಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡ ದಂಗೆಯ ಹಿಂದೆ ಪಾಕಿಸ್ತಾನ ಹಾಗೂ ಚೀನಾದ ಕೈವಾಡವಿದೆ ಎಂಬ ಸುದ್ದಿಯೊಂದು ಹಬ್ಬಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಈಗ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಿರುವ ದಂಗೆಕೋರರು, ಸ್ವಾತಂತ್ರ ಬಾಂಗ್ಲಾದೇಶದ ಹಿರಿಮೆ ಎನಿಸಿದ್ದ ದೇಶ ನಿರ್ಮಾಣದ ಐತಿಹಾಸಿಕ ಕುರುಹು ಎಂದೇ ಗುರುತಿಸಲ್ಪಟ್ಟಿದ್ದ ಪ್ರತಿಮೆಗಳನ್ನು ಧ್ವಂಸ ಮಾಡಿದ್ದಾರೆ.

1971ರಲ್ಲಿ ಈಗಿನ ಪಾಕಿಸ್ತಾನದಿಂದ ಸಂಪೂರ್ಣವಾಗಿ ಬೇರ್ಪಟ್ಟು ಪ್ರತ್ಯೇಕ ಬಾಂಗ್ಲಾದೇಶವೆನಿಸಿಕೊಂಡಾಗ ಅಂದಿನ ಬಾಂಗ್ಲಾ ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಸೇನೆಯೂ ಸೋತು ಶರಣಾದ ಕ್ಷಣವನ್ನು ನೆನಪಿಸುವ ಐತಿಹಾಸಿಕ ಪ್ರತಿಮೆಯನ್ನು ಬಾಂಗ್ಲಾದೇಶದಲ್ಲಿ ದುಷ್ಕರ್ಮಿಗಳು ಹೊಡೆದುರುಳಿಸಿ ಧ್ವಂಸ ಮಾಡಿದ್ದಾರೆ.

ಪ್ರತ್ಯೇಕ ಸ್ವಾತಂತ್ರ ಬಾಂಗ್ಲಾದೇಶಕ್ಕಾಗಿ ಹೋರಾಡಿದ್ದ ಯೋಧರು ಹಾಗೂ ಅಂದಿನ ಮಹತ್ವದ ಒಪ್ಪಂದದ ಭಾಗವಾಗಿ ಈ ಐತಿಹಾಸಿಕ ಸ್ವಾತಂತ್ರ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಸ್ವಾತಂತ್ರ ಬಾಂಗ್ಲಾದ ಪ್ರಾಣವೆನಿಸುವ ಅದನ್ನೇ ಒಡೆದು ಹುಡಿ ಹುಡಿ ಮಾಡಿದ್ದಾರೆ.

ಈ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರುಧ್ವಂಸಗೊಂಡ ಪ್ರತಿಮೆಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.

Image‘1971ರ ಹುತಾತ್ಮರ ಸ್ಮಾರಕ ಪ್ರತಿಮೆಯನ್ನು, ಈ ರೀತಿ ನೋಡುವುದಕ್ಕೆ ಬೇಸರವೆನಿಸುತ್ತಿದೆ ಭಾರತ ವಿರೋಧಿ ವಿಧ್ವಂಸಕರು ಬಾಂಗ್ಲಾದೇಶದ ಮುಜಿಬ್ನಗರದಲ್ಲಿ ಇವುಗಳನ್ನು ಧ್ವಂಸ ಮಾಡಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರಗಳು, ದೇಗುಲಗಳು, ಹಿಂದುಗಳ ಮನೆಗಳನ್ನು ಮತೀಯವಾದಿಗಳು ಧ್ವಂಸಗೊಳಿಸಿದ ಪ್ರಕರಣದ ನಂತರ ಈ ಘಟನೆ ನಡೆದಿದೆ. ಅಲ್ಲಿನ ಮುಸ್ಲಿಂ ನಾಗರಿಕರು ಅಲ್ಲಿರುವ ಇತರ ಅಲ್ಪಸಂಖ್ಯಾತರ ಮನೆಗಳನ್ನು ಶ್ರದ್ಧಾಕೇಂದ್ರಗಳನ್ನು ರಕ್ಷಿಸಿದರು ಎಂದು ವರದಿಗಳಲ್ಲಿ ಕೇಳಲ್ಪಟ್ಟ ನಂತರವೂ ಅಲ್ಲಿ ಈ ರೀತಿಯ ಘಟನೆ ನಡೆದಿದೆ.”ಹೀಗಾಗಿ ಈ ದಂಗೆಕೋರರ ಅಜೆಂಡಾ ಏನು ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಹೀಗಾಗಿ ಯೂನುಸ್ ಅವರ ಹಂಗಾಮಿ ಸರ್ಕಾರವೂ ಈ ಬಗ್ಗೆ ತುರ್ತು ಕ್ರಮ ಕೈಗೊಂಡು ದೇಶದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಂಡು ಎಲ್ಲಾ ಬಾಂಗ್ಲಾದೇಶಿಗರ ಹಿತವನ್ನು ನಂಬಿಕೆಯನ್ನು ರಕ್ಷಿಸಬೇಕು’ ಎಂದು ಬರೆದುಕೊಂಡಿರುವ ಶಶಿ ತರೂರ್.

ಅಂದಹಾಗೆ 1971ರ ಯುದ್ಧವೂ ಕೇವಲ ಬಾಂಗ್ಲದೇಶವನ್ನು ಸ್ವಾತಂತ್ರಗೊಳಿಸಿಲ್ಲ ಇದರ ಜೊತೆಗೆ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿತ್ತು. ಈಗ ದಂಗೆಕೋರರಿಂದ ಧ್ವಂಸಗೊಂಡಿರುವ ಸ್ಮಾರಕವೂ ಅಂದಿನ ಪಾಕಿಸ್ತಾನದ ಸೇನೆಯ ಮೇಜರ್ ಜನರಲ್ ಅಮಿರ್ ಅಬ್ದುಲ್ ಖಾನ್ ನಿಯಾಜಿ ಸೋತು ಭಾರತೀಯ ಸೇನೆ ಹಾಗೂ ಬಾಂಗ್ಲಾದೇಶದ ಮುಕ್ತಿವಾಹಿನಿಗೆ ಶರಣಾಗುವುದನ್ನು ಬಿಂಬಿಸುತ್ತಿತ್ತು. ಅಂದಿನ ಯುದ್ಧದಲ್ಲಿ ಪಾಕಿಸ್ತಾನದ ಮೇಜರ್ ಜನರಲ್ ನಿಯಾಜಿ ಅವರು ತಮ್ಮ 93 ಸಾವಿರ ಯೋಧರೊಂದಿಗೆ ಭಾರತದ ಪೂರ್ವ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಗ್ ಇನ್ ಚೀಫ್‌ ಲೆಫ್ಟಿನೆಂಟ್ ಜನರಲ್ ಜಗ್ಜಿತ್ ಸಿಂಗ್ ಆರೋರಾ ಅವರಿಗೆ ಶರಣಾಗಿದ್ದರು. ಇದು 2ನೇ ಮಹಾಯುದ್ಧದ ನಂತರ ನಡೆದ ಅತೀದೊಡ್ಡ ಸೇನಾ ಶರಣಾಗತಿ ಎನಿಸಿತ್ತು.

https://x.com/ShashiTharoor/status/1822830968702750934?ref_src=twsrc%5Etfw%7Ctwcamp%5Etweetembed%7Ctwterm%5E1822830968702750934%7Ctwgr%5E68f2e570d5ece0693d5f5eac61fe56ef089b661b%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FShashiTharoor%2Fstatus%2F1822830968702750934%3Fref_src%3Dtwsrc5Etfw

ಆದರೆ ಈಗ, ಅಂದು ಪೂರ್ವ ಪಾಕಿಸ್ತಾನ ಎನಿಸಿದ್ದ ಬಾಂಗ್ಲಾವೂ ಸ್ವಾತಂತ್ರ ಬಾಂಗ್ಲಾದೇಶವೆನಿಸಿಕೊಳ್ಳಲು ಕಾರಣವಾದ ದೇಶದ ಅತ್ಯುಚ್ಛ ಸ್ಮಾರಕ ಎನಿಸಿದ್ದ ಇಂತಹ ಪ್ರತಿಮೆಗಳನ್ನೇ ದಂಗೆಕೋರರು ಧ್ವಂಸಗೊಳಿಸಿರುವುದ ನೋಡಿದ್ದರೆ ಇದರ ಹಿಂದೆ ಬೇರೆನೋ ಅಂತಾರಾಷ್ಟ್ರೀಯ ಮಟ್ಟದ ಮಸಲತ್ತುಗಳಿರುವುದು ನಿಜ ಎಂಬುದು ಸಾಬೀತಾಗುತ್ತಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!