ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ: ದೇಶದಾದ್ಯಂತ ಬೃಹತ್ ಚಳುವಳಿಗೆ ಕಾಂಗ್ರೆಸ್ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಪಕ್ಷ ಉನ್ನತ ಮಟ್ಟದ ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಅಂಬಿಕಾ ಸೋನಾ, ಪಿ.ಚಿದಂಬರಂ, ಪವನ್ ಖೇಡಾ, ಜೈರಾಮ್ ರಮೇಶ್, ಪ್ರಿಯಾಂಕಾ ಗಾಂಧಿ, ಆನಂದ್ ಶರ್ಮಾ, ರಾಜೀವ್ ಶುಕ್ಲಾ, ಸಲ್ಮಾನ್ ಖುರ್ಷಿದ್, ಪವನ್ ಬನ್ಸಾಲ್, ಮೀರಾ ಕುಮಾರ್, ಅಧೀರ್ ರಂಜನ್ ಚೌಧರಿ ಸಭೆಯಲ್ಲಿ ಭಾಗವಹಿಸಿದ್ದರು. ಎಐಸಿಸಿ ಪ್ರಧಾನ ಕಛೇರಿ, ಅಭಿಷೇಕ್ ಮನು ಸಿಂಘ್ವಿ, ತಾರಿಕ್ ಅನ್ವರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಸಭೆಯ ನಂತರ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ದೇಶದಲ್ಲಿ ಬೃಹತ್ ಚಳವಳಿಗೆ ಕಾಂಗ್ರೆಸ್ ಕರೆ ನೀಡಲಾಗಿದ್ದು, ಸೋಮವಾರದಿಂದ ದೇಶದ ಮೂಲೆ ಮೂಲೆಗಳಲ್ಲಿ ಈ ನಿರ್ಧಾರದ ವಿರುದ್ಧ ದೊಡ್ಡ ದೊಡ್ಡ ಪ್ರತಿಭಟನೆ ನಡೆಯಲಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಜೆ 2 ಗಂಟೆಗಳ ಕಾಲ ಸಭೆ ನಡೆಸಿದ್ದು, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಭಾಗಿಯಾಗಿದ್ದಾರೆ. ಅಂದ್ಹಾಗೆ, 50 ಜನರು ಸಭೆಯಲ್ಲಿದ್ದರು ಮತ್ತು 50 ಜನರು ಜೂಮ್ ಮೀಟಿಂಗ್ ಮೂಲಕ ಸೇರಿಕೊಂಡರು. ಸಂಘಟಿತರಾಗಿ ಯಾವ ಕ್ರಮಗಳನ್ನ ಕೈಗೊಳ್ಳಬಹುದು, ಮುಂದಿನ ನಡೆ ಏನು ಎಂಬುದನ್ನ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!