ಈಗಿಲ್ಲದ ವೋಹ್ರಾ ಮೇಲೆ ದೂರಿದ್ರಾ ರಾಹುಲ್ ಗಾಂಧಿ? ತಮ್ಮ ಉತ್ತರ ಸರಿ ಮಾಡೋಕೇ ತಾಸುಗಟ್ಟಲೆ ಸಮಯ ತೆಗೆದುಕೊಂಡ್ರಂತೆ ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಇಡಿ ಡ್ರಿಲ್‌ ಮುಂದುವರೆದಿದೆ. ವಿಚಾರಣೆಯ ಸಂದರ್ಭದಲ್ಲಿ ಇಡಿ ಅಧಿಕಾರಗಳು ಕೇಳಿದ ಪ್ರಶ್ನೆಗಳಿಗೆ ರಾಹುಲ್‌ ಗಾಂಧಿ ಉತ್ತರವೇನು ಎಂಬುದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೂಲಗಳ ಪ್ರಕಾರ ಎಜೆಲ್‌ ಆಸ್ತಿ ವಶಪಡಿಸಿಕೊಂಡಿರುವ ಕುರಿತು ರಾಹುಲ್‌ ಗಾಂಧಿ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಯಂಗ್‌ ಇಂಡಿಯಾದ ನಿರ್ದೇಶಕ ಹಾಗೂ ಕಾಂಗ್ರೆಸ್‌ ಖಜಾಂಚಿಯಾಗಿದ್ದ ಮೋತಿಲಾಲ್‌ ವೋಹ್ರಾ ಅವರ ಮೇಲೆ ಹಾಕಿದ್ದಾರೆ ಎನ್ನಲಾಗಿದೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) ನೂರಾರು ಕೋಟಿ ಮೌಲ್ಯದ ಆಸ್ತಿಯನ್ನು ಯಂಗ್‌ ಇಂಡಿಯಾ ವಶಪಡಿಸಿಕೊಳ್ಳುವಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಅದೇನಿದ್ದರೂ ಮೋತಿಲಾಲ್‌ ವೋಹ್ರಾ ಸಂಬಂಧಪಟ್ಟಿದ್ದು. ಅವರೇ ಇದಕ್ಕೆ ಹೊಣೆಗಾರರು ಎಂದು ರಾಹುಲ್‌ ಗಾಂಧಿ ಉತ್ತರ ನೀಡಿದ್ದಾರೆ.

ಇನ್ನು ಯಂಗ್‌ ಇಂಡಿಯಾ ಕಾಂಗ್ರೆಸ್‌ ನಿಂದ ಬಡ್ಡಿರಹಿತ ಸಾಲ ಪಡೆದ ಪ್ರಶ್ನೆಗೂ ರಾಹುಲ್‌ ಗಾಂಧಿ ಕಳೆದ ವರ್ಷ ನಿಧನರಾಗಿರುವ ಮೋತಿಲಾಲ್‌ ವೋಹ್ರಾರವರನ್ನೇ ಹೊಣೆಗಾರರನ್ನಾಗಿಸಿದ್ದು ಸಾಲ ಪಡೆದ ಕುರಿತು ತಮಗೆ ಯಾವುದೇ ಮಾಹಿತಿಯಲ್ಲ. ಎಲ್ಲಾ ವ್ಯವಹಾರವನ್ನು ಮೋತಿಲಾಲ್‌ ವೋಹ್ರಾರವರೇ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ಇನ್ನು ರಾಹುಲ್‌ ಗಾಂಧಿಯವರನ್ನು ಸತತವಾಗಿ ಎಂಟು ಹತ್ತು ಗಂಟೆಗಳ ಕಾಲ ಇಡಿ ಪ್ರಶ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಡಿ ಅಧಿಕಾರಿಗಳು ವಾಸ್ತವದಲ್ಲಿ ಅಷ್ಟೊಂದು ಸಮಯ ವಿಚಾರಣೆ ನಡೆದಿಲ್ಲ ಹತ್ತು ಗಂಟೆ ಸಮಯದಲ್ಲಿ ಕೇವಲ ಮೂರು ಗಂಟೆ ಮಾತ್ರ ಪ್ರಶ್ನೆ ಕೇಳಲಾಗಿದೆ. ಉಳಿದ ಸಮಯದಲ್ಲಿ ಅವರ ಹೇಳಿಕೆಯನ್ನು ದೃಢಪಡಿಸಲಾಗಿದೆ. ಅವರು ನೀಡಿರುವ ಉತ್ತರಗಳನ್ನು ಪ್ರೂಫ್‌ ರೀಡ್‌ ಮಾಡಿ ತಪ್ಪುಗಳಿದ್ದರೆ ತಿದ್ದುಪಡಿ ಮಾಡಲಾಗಿದೆ. ಅವರ ಉತ್ತರಗಳನ್ನು ರಾಹುಲ್‌ ಗಾಂಧಿಯವರೇ ಸ್ವತಃ ಪರಿಶೀಲನೆ ನಡೆಸುತ್ತಿದ್ದಾರೆ. ತಪ್ಪಾಗಿ ಟೈಪ್‌ ಆಗಿರುವುದನ್ನು ಪತ್ತೆ ಹಚ್ಚಿ ಅದನ್ನು ಸರಿಪಡಿಸಲಾಗುತ್ತಿದೆಯೇ ವಿನಃ ನಿರಂತರವಾಗಿ ಹತ್ತುಗಂಟೆ ವಿಚಾರಣೆ ನಡೆದಿಲ್ಲ. ತಮ್ಮ ಹೇಳಿಕೆಗಳನ್ನು ಸ್ವತಃ ರಾಹುಲ್‌ ಗಾಂಧಿಯವರೇ ಪರಿಶೀಲಿಸಿ ಸರಿಪಡಿಸುತ್ತಿದ್ದಾರೆ. ಅದರ ಪರಿಶೀಲನೆಗೆಂದೇ ಅವರು 2-3 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!