ಬಜೆಟ್ ಮಂಡನೆ ವೇಳೆ ತಲೆಗೆ ಕೈಕೊಟ್ಟು ಕುಳಿತ ರಾಹುಲ್ ಗಾಂಧಿ: ಫೋಟೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಬಜೆಟ್ 2022 ಮಂಡಿಸಿದ್ದು, ಈ ವೇಳೆ ರಾಹುಲ್ ಗಾಂಧಿ ತಲೆ ಕೆಳಗೆ ಹಾಕಿ ಕುಳಿತಿದ್ದ ಫೋಟೋ ಇದೀಗ ಟ್ರೋಲ್ ಗೆ ಒಳಗಾಗಿದೆ.
ಸದನದಲ್ಲಿದ್ದ ಇಂದು ಎಲ್ಲ ಸಂಸದರು ಬಜೆಟ್ ನ ವಿಚಾರಗಳನ್ನು ಗಂಭೀರವಾಗಿ ಆಲಿಸುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ಯಾವುದೇ ಸಂಬಂಧವಿಲ್ಲದ ರೀತಿ ತಲೆಗೆ ಕೈಕೊಟ್ಟು ಕುಳಿತ್ತಿರುವ ಚಿತ್ರ ಎಲ್ಲೆಡೆ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ರಾಹುಲ್ ಗಾಂಧಿ ಅವರ ಫೋಟೋ ಕುರಿತು ಮೀಮ್‌ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕೆಲವು ಬಳಕೆದಾರರು ಮೀಮ್ ಅನ್ನು ಹಂಚಿಕೊಳ್ಳುವಾಗ, ರಾಹುಲ್ ಗಾಂಧಿ 2022 ರ ಬಜೆಟ್ ಅನ್ನು ಏಕೆ ಮಂಡಿಸುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದಾರೆ?’ ಎಂದು ಬರೆದಿದ್ದಾರೆ.
ಇದೇ ರೀತಿ ಹಲವಾರು ನಾನಾ ರೀತಿಯಲ್ಲಿ ಮೀಮ್‌ ಗಳನ್ನು ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!