ರಾಷ್ಟ್ರಗೀತೆಗೂ ಬೇರೆ ಹಾಡಿಗೂ ವ್ಯತ್ಯಾಸ ಗೊತ್ತಿಲ್ವಾ? ಕೈ ನಾಯಕರಿಗೆ ಬಿಜೆಪಿ ತರಾಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ ಯಡವಟ್ಟಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ರಾಹುಲ್‌ ಪಾದಯಾತ್ರೆ ಮುದುವರೆದಿದ್ದು, ಯಾತ್ರೆ ಭಾಗವಾಗಿ ನಿನ್ನೆ ವಾಶಿಮ್‌ನಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿತ್ತು. ಕಾರ್ಯಕ್ರಮದ ವೇಳೆ ರಾಷ್ಟ್ರಗೀತೆ ಹಾಕುವ ಬದಲಗಿ ಬೇರೆ ಹಾಡು ಪ್ಲೇ ಆಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್‌ನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೀಗ ರಾಷ್ಟ್ರಗೀತೆ ಹಾಡುವ ಸಮಯ ಎಂದು ಎಲ್ಲರೂ ಎದ್ದು ನಿಂತ ಕೂಡಲೇ ʻಜನ ಗಣ ಮನʼ ಬದಲಿಗೆ ಬೇರೆ ಹಾಡು ಬಂದಿದೆ. ಬೇರೆ ಹಾಡು ಪ್ಲೇ ಆಗುತ್ತಿದ್ದರೂ ಕೈ ನಾಯಕರು ಕೆಲ ಕಾಲ ಸುಮ್ಮನೆ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಕುರಿತು ಇದೀಗ ಭಾರೀ ಟೀಕೆ ವ್ಯಕ್ತವಾಗಿದ್ದು, ರಾಷ್ಟ್ರಗೀತೆಗೂ ಬೇರೆ ಹಾಡಿಗೂ ವ್ಯತ್ಯಾಸ ಗೊತ್ತಿಲ್ವೇ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯದ ಬಳಿಕ ರಾಹುಲ್‌ ಗಾಂಧಿ ನಾಯಕರತ್ತ ಸನ್ನೆ ಮಾಡಿ ರಾಷ್ಟ್ರಗೀತೆ ಹಾಕಿಸಿದರು. ಈ ವಿಡಿಯೋಗೆ ನೆಟ್ಟಿಗರು ರಾಹುಲ್‌ ಗಾಂಧಿ ಹಾಗೂ ಕೈ ನಾಯಕರಿಗೆ ಟೀಕೆಗಳ ಸುರಿಮಳೆ ಹರಿಸುತ್ತಿದ್ದಾರೆ. ಇಂಥವರಿಂದ ಇದನ್ನಲ್ಲದೇ ಇನ್ನೇನು ಬುಯಸಲು ಸಾಧ್ಯ ಎಂದು ಕಿಡಿ ಕಮೆಂಟ್‌ ಮಾಡುತ್ತಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!