Wednesday, November 30, 2022

Latest Posts

ಗ್ರಾಹಕರಿಗೆ ಕೇಂದ್ರದಿಂದ ಗುಡ್‌ನ್ಯೂಸ್: ಗ್ಯಾಸ್ ಸಿಲಿಂಡರ್‌ಗೂ ಬರಲಿದೆ ಕ್ಯೂಆರ್ ಕೋಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಡುಗೆ ಅನಿಲ ಸಿಲಿಂಡರ್ ದುರ್ಬಳಕೆ ತಪ್ಪಿಸಲು ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು, ಇನ್ನು ಮುಂದೆ ಸಿಲಿಂಡರ್‌ಗಳಲ್ಲಿ ಶೀಘ್ರ ಕ್ಯೂಆರ್ ಕೋಡ್ ಕಾಣಿಸಿಕೊಳ್ಳಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಟ್ರ್ಯಾಕ್ ಮಾಡಲು ಈ ವಿಧಾನದಿಂದ ಸಾಧ್ಯವಾಗಲಿದೆ. ಅಲ್ಲದೆ ಸಿಲಿಂಡರ್ ಗಳ ನಿರ್ವಹಣೆ ಇನ್ನಷ್ಟು ಸುಲಭವಾಗಲಿದೆ ಎಂದಿದ್ದಾರೆ.

ಹೇಗಿರಲಿದೆ?
ಕ್ಯೂ ಆರ್ ಕೋಡ್ ಸಿಲಿಂಡರ್‌ನಲ್ಲಿ ವೆಲ್ಡ್ ಮಾಡಲಾಗುತ್ತದೆ. ಇದರ ನೆರವಿನಿಂದ ಗ್ರಾಹಕರು ಸಿಲಿಂಡರ್ ಬಗ್ಗೆ ಪೂರ್ಣ ಮಾಹಿತಿ ಕ್ಷಣದಲ್ಲಿ ಪಡೆದುಕೊಳ್ಳಬಹುದಾಗಿದೆ. ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ, ಕ್ಯೂಆರ್ ಕೋಡ್ ಹೊಂದಿರುವ 20 ಸಾವಿರ ಎಲ್‌ಪಿಜಿ ಸಿಲಿಂಡರ್ ಗಳನ್ನು ಯುಎನ್ ಕೋಡ್ ಆಧಾರಿತ ಟ್ರ್ಯಾಕ್ ಅಡಿಯಲ್ಲಿ ವಿತರಿಸಲಾಗುತ್ತದೆ. ಈ ಕ್ಯೂಆರ್ ಕೋಡನ್ನು ಡಿಜಿಟಲ್ ಸಾಧನಗಳ ಮೂಲಕ ಸುಲಭವಾಗಿ ಓದಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!