‘ರೈಲ್ವೆ ಖಾಸಗೀಕರಣ’ ಕುರಿತು ರಾಹುಲ್ ಗಾಂಧಿ ಟ್ವೀಟ್: ʼಫ್ಯಾಕ್ಟ್‌ ಚೆಕ್‌ʼ ಮೂಲಕ ಸುಳ್ಳೆಂದ ಪಿಐಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರೇಲ್ವೇಖಾಸಗೀಕರಣದ ಕುರಿತು ರಾಹುಲ್‌ ಗಾಂಧಿಯವರ ಟ್ವೀಟ್‌ ಸುಳ್ಳು ಎಂದು ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ ಹೇಳಿದೆ. ಈ ಕುರಿತು ರಾಹುಲ್ ಗಾಂಧಿಯವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಪಿಐಬಿ ಫ್ಯಾಕ್ಟ್ ಚೆಕ್‌ನ ಟ್ವಿಟರ್ ಹ್ಯಾಂಡಲ್ ಮಾಹಿತಿ ಸುಳ್ಳು ಎಂದು ಹೇಳಿದೆ.

ಭಾರತೀಯ ರೈಲ್ವೆಯ 151 ರೈಲುಗಳನ್ನು ಖಾಸಗೀಕರಣಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದರು. ಇದು ಸುಳ್ಳು ಮತ್ತು ಸಂಪೂರ್ಣವಾಗಿ ಆಧಾರರಹಿತವಾಗಿದೆ. ರೈಲ್ವೆ ತನ್ನ ಯಾವುದೇ ಆಸ್ತಿಯನ್ನು ಖಾಸಗೀಕರಣಗೊಳಿಸಿಲ್ಲ ಎಂದು ಪಿಐಬಿ ಫ್ಯಾಕ್ಟ್‌ ಚೆಕ್‌ ಹೇಳಿದೆ.

ರಾಹುಲ್ ಗಾಂಧಿ ಅವರು ಶನಿವಾರ ತಮ್ಮ ಟ್ವೀಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು “ರೈಲ್ವೆ ಭಾರತವನ್ನು ಸಂಪರ್ಕಿಸುತ್ತದೆ ಪ್ರತಿದಿನ 2.5 ಕೋಟಿ ಪ್ರಯಾಣಿಕರಿಗೆ ಸೇವೆಗಳನ್ನು ಮತ್ತು 12 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ. ಪ್ರಧಾನಮಂತ್ರಿ ಜೀ, ರೈಲ್ವೆ ದೇಶದ ಆಸ್ತಿ, ಖಾಸಗೀಕರಣ ಮಾಡಬೇಡಿ. ಅದನ್ನು ಬಲಗೊಳಿಸಿ ಅದನ್ನು ಮಾರಬೇಡಿ” ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್‌ ನ ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಂಡಿರುವ ಪಿಐಬಿ ಈ ಮಾಹಿತಿ ಸುಳ್ಳು ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!