ಕಳಪೆ ಫಾರ್ಮ್ ನಲ್ಲಿ ರಾಹುಲ್: ಈ ಕುರಿತು ಕೋಚ್ ದ್ರಾವಿಡ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಳೆದ ಹಲವು ಪಂದ್ಯಗಳಿಂದ ಕಳಪೆ ಫಾರ್ಮ್ ನಿಂದ ರಾಹುಲ್ ಓದಾಡುತ್ತಿದ್ದು,ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಹೀಗಾಗಿ ಅನೇಕರು ರಾಹುಲ್ ಅನ್ನು ತಂಡದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಆದಾಗ್ಯೂ ಭಾರತ ತಂಡದ ಹೆಡ್​ ಕೋಚ್​ ರಾಹುಲ್​ ದ್ರಾವಿಡ್​ ಅವರು ಬೆಂಬಲಕ್ಕೆ ನಿಂತಿದ್ದಾರೆ. ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾತನ್ನು ಉಚ್ಛರಿಸಿದ್ದಾರೆ.

ಕೆ. ಎಲ್​ ರಾಹುಲ್​ ಉತ್ತಮ ಬ್ಯಾಟರ್​ ಆಗಿರುವ ಕಾರಣ ಅವರಿಗೆ ಹೆಚ್ಚಿನ ಬೆಂಬಲದ ಅಗತ್ಯ ಇರುವುದಿಲ್ಲ. ಅವರ ತಾಂತ್ರಿಕ ನೈಪುಣ್ಯ ಹೆಚ್ಚಿಸುವ ಅಗತ್ಯವೂ ಇಲ್ಲ. ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಪ್ರದರ್ಶನ ಕಂಡುಕೊಳ್ಳುವುದಕ್ಕೆ ನೆರವಾಗಬಹುದು ಎಂಬುದಾಗಿ ರಾಹುಲ್​ ದ್ರಾವಿಡ್ ಅವರು ಹೇಳಿದ್ದಾರೆ.

ಭಾರತ ತಂಡ ಗೆಲುವಿಗೆ ಅಕ್ಷರ್ ಪಟೇಲ್​ ಹಾಗೂ ಅಶ್ವಿನ್ ಅವರ ಬ್ಯಾಟಿಂಗ್​ ನೆರವಾಯಿತು ಎಂಬುದಾಗಿಯೂ ಅವರೂ ಹೇಳಿದರು. ಮೊದಲ ಇನಿಂಗ್ಸ್​ನಲ್ಲಿ ಭಾರತ ತಂಡದ ಕನಿಷ್ಠ ಮೊತ್ತಕ್ಕೆ ಆಲ್​ಔಟ್ ಆಗುವ ಅವಕಾಶಗಳಿದ್ದವು. ಆದರೆ, ಆರ್​. ಅಶ್ವಿನ್ ಮತ್ತು ಅಕ್ಷರ್​ ಪಟೇಲ್​ ಜೋಡಿ ಶತಕದ ಜತೆಯಾಟವಾಡಿದರು. ಅವರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡದಲ್ಲಿ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು ಎಂಬುದಾಗಿ ದ್ರಾವಿಡ್​ ಹೇಳಿದರು. ಇದೇ ವೇಳೆ ಅವರು ಟೀಮ್​ ಇಂಡಿಯಾದ ಬೌಲರ್​ಗಳ ಶ್ರಮವನ್ನೂ ಕೊಂಡಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!