ಮದುವೆಗೆ ಸಜ್ಜಾದ ಓಯೊ ಮುಖ್ಯಸ್ಥ: ಪ್ರಧಾನಿ ಮೋದಿಗೂ ಆತ್ಮೀಯ ಕರೆಯೋಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮುಂದಿನ ತಿಂಗಳು ಓಯೊ ಮುಖ್ಯಸ್ಥ ರಿತೇಶ್ ಅಗರ್​ವಾಲ್​ ಮದುವೆಯಾಗಲು ಸಜ್ಜಾಗಿದ್ದು ಹೀಗಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ.

ಪ್ರಧಾನಿ ನಿವಾಸಕ್ಕೆ ರಿತೇಶ್ ಅಗರ್​ವಾಲ್​, ತಮ್ಮ ತಾಯಿ ಮತ್ತು ಅವರ ಭಾವಿ ಪತ್ನಿಯೊಂದಿಗೆ ತೆರಳಿ ಆಮಂತ್ರಿಸಿದ್ದು ಭೇಟಿಯ ಫೋಟೊಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಿತೇಶ್​ ಅಗರ್​ವಾಲ್​ ಹಂಚಿಕೊಂಡಿರುವ ಫೋಟೋಗಳಲ್ಲಿ ಭಾವಿ ದಂಪತಿ ಪ್ರಧಾನಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಅಗರ್ವಾಲ್ ಕೂಡ ಪ್ರಧಾನಿಯವರ ಭುಜಕ್ಕೆ ಶಾಲು ಹೊದಿಸಿದರು.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಓಯೊ ಮುಖ್ಯಸ್ಥ ‘ಪ್ರಧಾನ ಮಂತ್ರಿ ಅವರ ಆಶೀರ್ವಾದದೊಂದಿಗೆ, ನಾವು ಹೊಸ ಜೀವನಕ್ಕೆ ಸಿದ್ಧರಾಗಿದ್ದೇವೆ’ ಎಂದು ಅವರು ಬರೆದಿದ್ದಾರೆ. ‘ಅವರು ನಮ್ಮನ್ನು ಸ್ವೀಕರಿಸಿದ ರೀತಿಯನ್ನು ಪದಗಳು ಬಣ್ಣಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!