ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 50 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 287ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡದ ಗೆಲುವಿಗೆ 288ರನ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಡಿಯಾ, ಉತ್ತಮ ಆರಂಭ ಪಡೆದುಕೊಂಡಿತು. 29ರನ್ಗಳಿಕೆ ಮಾಡಿದ್ದ ವೇಳೆ ಧವನ್ ಮಗಲಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಎರಡನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಬಳಿಕ ಕ್ಯಾಪ್ಟನ್ ರಾಹುಲ್ ಜೊತೆ ಸೇರಿದ ವಿಕೆಟ್ ಕೀಪರ್ ರಿಷಭ್ ಪಂತ್ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡುವ ಜೊತೆಗೆ ಅರ್ಧಶತಕ ಸಿಡಿಸಿ ಮಿಂಚಿದರು. 79 ಎಸೆತಗಳಲ್ಲಿ 55ರನ್ಗಳಿಕೆ ಮಾಡಿದ್ದ ರಾಹುಲ್ ಮಗಲಾ ಓವರ್ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಪಂತ್ 71 ಎಸೆತಗಳಲ್ಲಿ 2 ಆಕರ್ಷಕ ಸಿಕ್ಸರ್, 10 ಬೌಂಡರಿ ಸೇರಿದಂತೆ 85ರನ್ಗಳಿಕೆ ಮಾಡಿ ಔಟಾದರು.
ತದನಂತರ ವೆಂಕಟೇಶ್ ಅಯ್ಯರ್ 22ರನ್, ಶಾರ್ದೂಲ್ ಠಾಕೂರ್ ಅಜೇಯ 40ರನ್ ಹಾಗೂ ಅಶ್ವಿನ್ ಅಜೇಯ 25ರನ್ಗಳಿಕೆ ಮಾಡಿ ತಂಡ 6 ವಿಕೆಟ್ನಷ್ಟಕ್ಕೆ 287ರನ್ಗಳಿಕೆ ಮಾಡಲು ಸಹಾಯ ಮಾಡಿದರು.
ದಕ್ಷಿಣ ಆಫ್ರಿಕಾ ಪರ ಶಮ್ಸಿ 2 ವಿಕೆಟ್ ಪಡೆದುಕೊಂಡರೆ, ಮಗಲಾ, ಮರ್ಕ್ರಾಮ್, ಮಹಾರಾಜ್ ಹಾಗೂ ಪೆಹ್ಲಿಕೈ ತಲಾ 1 ವಿಕೆಟ್ ಪಡೆದುಕೊಂಡರು.