ರಾಹುಲ್ ಪತ್ರಿಕಾಗೋಷ್ಟಿ: ‘ರಿಮೋಟ್ ಕಂಟ್ರೋಲ್’ ಆರೋಪಕ್ಕೆ ಉತ್ತರ, ಅದಾನಿ ಸಮರ್ಥನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಭಾರತ ಜೋಡೊ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಶನಿವಾರ ತುರುವೇಕೆರೆಯಲ್ಲಿ ಪತ್ರಿಕಾಗೋಷ್ಟಿ ನಡೆಸಿದರು. ಆರೆಸ್ಸೆಸ್-ಬೆಜೆಪಿಯ ಸಿದ್ಧಾಂತದ ವಿರುದ್ಧ ಹೋರಾಟ, ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು ಅದನ್ನು ಬಲಪಡಿಸಲಿದ್ದೇವೆ ಎಂಬ ಈ ಹಿಂದಿನ ಹೇಳಿಕೆಗಳ ಪುನರುಚ್ಛಾರಗಳು ಉತ್ತರ ರೂಪದಲ್ಲಿ ಬಂದವು. ಹೀಗೆ ಸಾಮಾನ್ಯವಾಗಿ ಮರುಕಳಿಸುವ ಪ್ರಶ್ನೆಗಳ ಆಚೆಗೆ ತೂರಿಬಂದ ಕೆಲ ಪ್ರಶ್ನೆಗಳು ಮತ್ತು ಅವಕ್ಕೆ ರಾಹುಲ್ ಗಾಂಧಿ ಅವರ ಉತ್ತರಗಳು ಹೀಗಿದ್ದವು.
ಪ್ರಶ್ನೆ: ಮಲ್ಲಿಕಾರ್ಜುನ ಖರ್ಗೆ, ಶಶಿ ತರೂರ್ ಇವರಲ್ಲಿ ಯಾರೇ ಪಕ್ಷದ ಅಧ್ಯಕ್ಷರಾದರೂ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಂದ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂಬ ಆಪಾದನೆಗೆ ಹೇಗೆ ಪ್ರತಿಕ್ರಿಯಿಸುತ್ತೀರಿ?
ಉತ್ತರ: ಕಣದಲ್ಲಿರುವ ಇಬ್ಬರೂ ತಮ್ಮ ವಿಚಾರಗಳನ್ನು ಮುಂದಿರಿಸಿದ್ದಾರೆ. ಆ ಆಧಾರದಲ್ಲಿ ಪಕ್ಷದಲ್ಲಿ ಅವರ ಚುನಾವಣೆ ನಡೆಯುತ್ತದೆ. ಇಬ್ಬರೂ ತಮ್ಮದೇ ವ್ಯಕ್ತಿತ್ವ ಹೊಂದಿರುವವರು. ಹೀಗಾಗಿ ಅವರು ರಿಮೋಟ್ ಕಂಟ್ರೋಲ್ ಪ್ರಕ್ರಿಯೆಗೆ ಒಳಗಾಗುತ್ತಾರೆ ಎಂದು ಹೇಳುವುದು ಅವರ ವ್ಯಕ್ತಿತ್ವವನ್ನು ಅವಮಾನಿಸಿದಂತೆ.

ಪ್ರಶ್ನೆ: ಬಿಜೆಪಿ ಮೇಲೆ ನೀವು ಅದಾನಿ-ಅಂಬಾನಿ ಬೆಳೆಸಿದ ಆರೋಪ ಮಾಡುತ್ತೀರಿ. ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ಗೌತಂ ಅದಾನಿ ಹೂಡಿಕೆಗೆ ಸ್ವಾಗತ ಸಿಕ್ಕಿದೆಯಲ್ಲ…
ಉತ್ತರ: ಬಿಜೆಪಿಯು 2-3 ಉದ್ಯಮಪತಿಗಳ ಹಿಡಿತಕ್ಕೆ ಎಲ್ಲವನ್ನೂ ಒಪ್ಪಿಸುತ್ತಿದೆ ಎಂಬುದಕ್ಕೆ ವಿರೋಧವಿದೆ. ಹೂಡಿಕೆಗೆ ಅಲ್ಲ. ರಾಜಸ್ಥಾನಕ್ಕೆ ಅದಾನಿ 60,000 ಕೋಟಿ ರುಪಾಯಿಗಳ ಹೂಡಿಕೆ ಪ್ರಸ್ತಾವ ಇಟ್ಟಿರುವಾಗ ಅದನ್ನು ಯಾವ ಮುಖ್ಯಮಂತ್ರಿಯೂ ವಿರೋಧಿಸಲಾರರು.

ಪ್ರಶ್ನೆ: ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಕಡಿಮೆ ಸ್ಥಾನಗಳು ಬಂದರೆ ಜೆಡಿಎಸ್ ಜತೆ ಕೈಜೋಡಿಸುತ್ತೀರಾ?
ಉತ್ತರ: ಇದಕ್ಕೆ ಉತ್ತರ ನೀಡಬಲ್ಲವರು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರು ಒಳಗೊಂಡಂತೆ ಕರ್ನಾಟಕದ ಕಾಂಗ್ರೆಸ್. ನನಗೆ ಕಾಂಗ್ರೆಸ್ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!