ರಾಹುಲ್​ ರನ್ನು ಅಂಡಮಾನ್‌ ಜೈಲಿಗೆ ಕಳುಹಿಸಬೇಕು: ರವಿಶಂಕರ್‌ ಪ್ರಸಾದ್‌ ಚಾಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಲೋಕಸಭೆಯಲ್ಲಿ ಸಂವಿಧಾನದ 75ನೇ ವರ್ಷಾಚರಣೆ ವೇಳೆಯ ಚರ್ಚೆಯ ಸಂದರ್ಭ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಾವರ್ಕರ್ ಕುರಿತಾದ ಹೇಳಿಕೆಗೆ ಬಿಜೆಪಿ ಸಂಸದ ರವಿಶಂಕರ್‌ ಪ್ರಸಾದ್‌ ಕೌಂಟರ್ ನೀಡಿದ್ದಾರೆ.

ಅವರಿಗೆ (ರಾಹುಲ್ ಗಾಂಧಿ) ವೀರ್ ಸಾವರ್ಕರ್ ಜೀ ಅವರೊಂದಿಗೆ ಸಮಸ್ಯೆಗಳಿವೆ ಎಂದು ನನಗೆ ತಿಳಿದಿದೆ, ಆದ್ದರಿಂದ ಅವರನ್ನು ಒಮ್ಮೆ ಅಂಡಮಾನ್ ಮತ್ತು ನಿಕೋಬಾರ್ ಜೈಲಿಗೆ ಕರೆದೊಯ್ಯಬೇಕು, ಸಾವರ್ಕರ್ ಜೀ ಅವರು ಅನುಭವಿಸಿದ ಅನುಭವವನ್ನು ರಾಹುಲ್​ ಅವರು ಅನುಭವಿಸದರೆ, ರಾಹುಲ್​ ಅವರಿಗೆ ಸಾವರ್ಕರ್​ ಅವರು ಅನುಭವಿಸಿದ ಕಷ್ಟಗಳು ಅರ್ಥವಾಗಬಹುದು ಎಂದರು.

ಇನ್ನು ರವಿಶಂಕರ್ ಪ್ರಸಾದ್ ಸಂವಿಧಾನದ ಮೂಲ ಪ್ರತಿಯಾದ ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರು ಮತ್ತು ಇತರರ ಸಹಿಯೊಂದಿಗೆ ಹಿಂದು ದೇವರುಗಳು, ಬುದ್ಧ ಮತ್ತು ಮಹಾವೀರರ ಚಿತ್ರಗಳಿರುವ ದಾಖಲೆಗಳನ್ನು ಪ್ರದರ್ಶಿಸಿ, ಮೂಲ ಪ್ರತಿಯಲ್ಲಿ ರಾಮ ಮತ್ತು ಕೃಷ್ಣ ಅವರ ಚಿತ್ರವಿತ್ತೇ, ವಿನಃ ಬಾಬರ್ ಚಿತ್ರವಲ್ಲ. ಯಾಕೆಂದರೆ ಭಾರತದ ಪರಂಪರೆಯ ಕುರಿತು ಸಂವಿಧಾನ ತಯಾರಕರಿಗೆ ತಿಳಿದಿತ್ತು ಎಂದು, ಸಂವಿಧಾನದಲ್ಲಿರುವ ಭಗವಾನ್ ರಾಮ, ಕೃಷ್ಣ ಮತ್ತು ಗುರು ಗೋಬಿಂದ್ ಸಿಂಗ್ ಅವರ ಚಿತ್ರಗಳನ್ನು ಎತ್ತಿ ತೋರಿಸಿ, ಕಾಂಗ್ರೆಸ್​ ವಿರುದ್ದ ಟೀಕೆಗಳ ಸುರಿಮಳೆ ಗೈದರು.

ಇದರ ನಡುವೆ ವಿರೋಧ ಪಕ್ಷದ ನಾಯಕ ರಾಹುಲ್​ರನ್ನು ಪ್ರಶ್ನಿಸಿದ ರವಿಶಂಕರ್​ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಪ್ರಯತ್ನಗಳಿಗೆ ಕಾಂಗ್ರೆಸ್​​ ಪಕ್ಷದವರು ಯಾಕೆ ಮನ್ನಣೆ ನೀಡುವುದಿಲ್ಲ ಎಂದು ಕೇಳಿದರು.

ಸರ್ದಾರ್ ಪಟೇಲ್ ಇಲ್ಲದಿದ್ದರೆ ಈ ದೇಶ ಛಿದ್ರವಾಗುತ್ತಿತ್ತು. ಅವರು ಸ್ವಾತಂತ್ರ್ಯದ ನಂತರ 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ನಿರ್ವಹಿಸಿದ ಪರಿಣಾಮ, ಅವರೆಲ್ಲರೂ ಭಾರತಕ್ಕೆ ಸೇರಿದರು. ಆದರೆ ಜವಾಹರಲಾಲ್ ನೆಹರು ಅವರು ಒಂದನ್ನು (ಕಾಶ್ಮೀರವನ್ನು ಉಲ್ಲೇಖಿಸಿ) ನಿಭಾಯಿಸಲಿ ಪರತಪಿಸಿದರು. ಆದರೆ ಕೊನೆಗೆ ಪ್ರಧಾನಿ ಮೋದಿ ಅವರೇ ಅದನ್ನು ಸರಿಪಡಿಸಬೇಕಾಯಿತ್ತು ಎಂದರು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!