April 25, 2026
Saturday, April 25, 2026
spot_img

DC ಪರ ರಾಹುಲ್ ಅಬ್ಬರದ ಬ್ಯಾಟಿಂಗ್: ಸಿಕ್ಕ ಜೀವದಾನಗಳನ್ನೇ ಶತಕವನ್ನಾಗಿಸಿದ ಕನ್ನಡಿಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 35ನೇ ಪಂದ್ಯದಲ್ಲಿ ರನ್ ಮಳೆ ಸುರಿದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಮುಖಾಮುಖಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್, ನಿಗದಿತ 20 ಓವರ್‌ಗಳಲ್ಲಿ 264 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ತಂಡ ದಾಖಲಿಸಿದ ಅತ್ಯಧಿಕ ಸ್ಕೋರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ದಾಖಲೆಯ ಮೊತ್ತದ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ಶಕ್ತಿಯಿದೆ. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್, ಪಂಜಾಬ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 67 ಎಸೆತಗಳಲ್ಲಿ 16 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ ಅಜೇಯ 152 ರನ್ ಸಿಡಿಸಿದರು. ಇದು ಅವರ ಐಪಿಎಲ್ ವೃತ್ತಿಜೀವನದ 6ನೇ ಶತಕವಾಗಿದ್ದು, ಇಡೀ ಕ್ರೀಡಾಂಗಣ ಅವರ ಬ್ಯಾಟಿಂಗ್ ವೈಖರಿಗೆ ಮಾರುಹೋಗಿದೆ.

ಈ ಇನ್ನಿಂಗ್ಸ್ ಮೂಲಕ ರಾಹುಲ್ ಹೊಸ ಇತಿಹಾಸ ಬರೆದಿದ್ದಾರೆ. ಐಪಿಎಲ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಈಗ ರಾಹುಲ್ ಪಾಲಾಗಿದೆ. ಈ ಹಿಂದೆ 145 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ರಾಹುಲ್ ಇಂದು ಅಳಿಸಿ ಹಾಕಿದ್ದಾರೆ.

ಐಪಿಎಲ್ ಇತಿಹಾಸದ ಗರಿಷ್ಠ ವೈಯಕ್ತಿಕ ಮೊತ್ತ (ಟಾಪ್ 3):

ಕ್ರಿಸ್ ಗೇಲ್: 175* ರನ್

ಬ್ರೆಂಡನ್ ಮೆಕಲಮ್: 158* ರನ್

ಕೆಎಲ್ ರಾಹುಲ್: 152* ರನ್

ಬ್ಯಾಟಿಂಗ್ ಸ್ನೇಹಿ ಪಿಚ್‌ನ ಸಂಪೂರ್ಣ ಲಾಭ ಪಡೆದ ರಾಹುಲ್, ಕೇವಲ 47 ಎಸೆತಗಳಲ್ಲಿ ಶತಕದ ಮೈಲಿಗಲ್ಲು ತಲುಪಿದರು. ಮಾರ್ಕೊ ಯಾನ್ಸನ್ ಎಸೆದ 15ನೇ ಓವರ್‌ನ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕ ಸಂಭ್ರಮ ಆಚರಿಸಿದರು. ಇದು ಡೆಲ್ಲಿ ಕ್ಯಾಪಿಟಲ್ಸ್ ಪರ ಅವರು ದಾಖಲಿಸಿದ 2ನೇ ಶತಕವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !