May 3, 2026
Sunday, May 3, 2026
spot_img

ಅಕ್ರಮ ಜೂಜಾಟ ಅಡ್ಡೆಯ ಮೇಲೆ ದಾಳಿ: ಆರು ಜನ ಅಂದರ್

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ನಗರದ ವಿವಿಧ ಬಾಗಗಳಲ್ಲಿ ಅಕ್ರಮವಾಗಿ ಜೂಜಾಟ ಅಡ್ಡೆಯ ಮೇಲೆ ದಾಳಿ ಮಾಡಿ ಆರು ಜನ ಆರೋಪಿಗಳನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಜುಜಾಟ ಆರೋಪಿಗಳಾದ ಮೋಶಿನಖಾನ ಮುನಿರಖಾನ ಪಠಾಣ (36) ಶೋಹಬ ಮನ್ಸೂರ ಮಕಾನದಾರ (34), ಹರೂನರಶೀದ ರಾಜೇಸಾಬ ತಿಗಡಿ (46), ಜಾಫರಸಾಧಿಕ ಇಮ್ಮಿಯಾಜ ಘೀವಾಲೆ (31), ಮೊಹಮ್ಮದರಶಿದ ಮಹಮ್ಮದಸಲೀಮ ಬೇಪಾರಿ ಹಾಗೂ ಜಾಫರ ಮೀರಾಸಾಬ ಸನದಿ (43) (ಪರಾರಿ) ಇವರುಗಳು ವೀರಭದ್ರ ನಗರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಇಸ್ಪೀಟ್ ಎಲೆಗಳ ಮೇಲೆ ಹಣ ಹಚ್ಚಿಸಿಕೊಂಡು ಆಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.

ಇದನ್ನೂ ಓದಿ:

ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ವಿಠಲ್ ಹಾವನ್ನವರ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತನಿಂದ ಹಣ ಹಾಗೂ ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆರು ಜನ ಆರೋಪಿಗಳ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 92/2026 ಕಲಂ. 87 ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !