October 27, 2026
Tuesday, October 27, 2026
spot_img

ಕಿತ್ತೂರು ಬಳಿ ಭೀಕರ ರಸ್ತೆ ಅಪಘಾತ: ಬೈಕ್‌ನಲ್ಲಿದ್ದ ದಂಪತಿ ಸೇರಿ ಮೂವರ ದುರ್ಮ*ರಣ

ಹೊಸದಿಗಂತ ವರದಿ ಕಿತ್ತೂರು:

ಟಾಟಾ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಮೂವರು ಮೃತಪಟ್ಟಿರುವ ದಾರುಣ ಘಟನೆ ಮಲ್ಲಾಪುರ–ದೇಮಟ್ಟಿ ಮಾರ್ಗ ಮಧ್ಯೆ ನಡೆದಿದೆ.

ಮೃತರನ್ನು ಧಾರವಾಡ ತಾಲೂಕಿನ ಹೆಗ್ಗೇರಿ ಮೂಲದ, ಪ್ರಸ್ತುತ ದೇಮಟ್ಟಿ ಗ್ರಾಮದಲ್ಲಿ ವಾಸವಿದ್ದ ಅಜಾದ್ ಇಸ್ಮಾಯಿಲ್ ಜಮಾದಾರ (45), ಅವರ ಪತ್ನಿ ಖೈರುನಬಿ ಅಜಾದ್ ಜಮಾದಾರ (40) ಹಾಗೂ ದೇಮಟ್ಟಿ ಗ್ರಾಮದ ಬಾಬಾಜಾನ್ ನಿಸಾರ್ ಅಹಮ್ಮದ್ ತಡಕೋಡ (16) ಎಂದು ಗುರುತಿಸಲಾಗಿದೆ.

ಮಲ್ಲಾಪುರ–ದೇಮಟ್ಟಿ ರಸ್ತೆಯಲ್ಲಿ ಅಪಘಾತ

ಕಿತ್ತೂರು ಕಡೆಯಿಂದ ಕೊಟಬಾಗಿ ಗ್ರಾಮದತ್ತ ಟಾಟಾ ಗೂಡ್ಸ್ ವಾಹನ ತೆರಳುತ್ತಿತ್ತು. ಇದೇ ವೇಳೆ ದೇಮಟ್ಟಿ ಗ್ರಾಮದ ಕಡೆಯಿಂದ ಮೂವರು ಸವಾರರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಮಲ್ಲಾಪುರ–ದೇಮಟ್ಟಿ ಮಾರ್ಗ ಮಧ್ಯೆ ಎರಡೂ ವಾಹನಗಳ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಅಜಾದ್ ಇಸ್ಮಾಯಿಲ್ ಜಮಾದಾರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಖೈರುನಬಿ ಹಾಗೂ ಬಾಬಾಜಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಿತ್ತೂರು ಪೊಲೀಸ್ ಠಾಣೆಯ ಪಿಎಸ್‌ಐ ಭರತ್ ಎಸ್. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

Skip to toolbar