Tuesday, August 16, 2022

Latest Posts

ಭಾರತ -ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಟಾಸ್ ಬೆನ್ನಲ್ಲೇ ಮಳೆ ವಕ್ಕರಿಸಿದ ಕಾರಣ ಇದೀಗ ಪಂದ್ಯ ಆರಂಭ ವಿಳಂಭವಾಗಿದೆ.
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಪಂದ್ಯ ಆರಂಭಕ್ಕೂ ಮುನ್ನ ಸುರಿದ ಮಳೆಯಿಂದ ನಿರಾಸೆಯಾಗಿದೆ.
ಕೆಲ ಹೊತ್ತಿನ ಬಳಿಕ ಮಳೆ ನಿಂತಿತ್ತು. ತಕ್ಷಣವೇ ಸಿಬ್ಬಂದಿಗಳು ಮೈದಾನ ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾದರು. ಆದರೆ ಮತ್ತೆ ಸುರಿದ ಮಳೆಯಿಂದ ಇದೀಗ ಪಂದ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್(ನಾಯಕ), ದಿನೇಶ ಕಾರ್ತಿಕ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯಜುವೇಂದ್ರ ಚಹಾಲ್, ಉಮ್ರಾನ್ ಮಲಿಕ್

ಐರ್ಲೆಂಡ್ ಪ್ಲೇಯಿಂಗ್ 1
ಪೌಲ್ ಸ್ಟಿರ್ಲಿಂಗ್, ಆ್ಯಂಡ್ರ್ಯೂ ಬಾಲ್‌ಬಿರ್ನೈ(ನಾಯಕ), ಗರೆತ್ ಡೆಲಾನಿ, ಹ್ಯಾರಿ ಟೆಕ್ಟರ್, ಲಾರ್ಕಾನ್ ಟಕರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೈರ್, ಆ್ಯಂಡಿ ಮೆಕ್‌ಬ್ರೈನ್, ಕ್ರೈಗ್ ಯಂಗ್, ಜುಶುವಾ ಲಿಟಲ್, ಕೊನೊರ್ ಆಲ್ಫರ್ಟ್

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss