ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನ ಕೆಆರ್ ಮಾರ್ಕೆಟ್‌ನಲ್ಲಿ ಮಂಗಳವಾರ ದುಡ್ಡಿನ ಮಳೆ ಸುರಿದಿದೆ.
ಹೌದು, ವ್ಯಕ್ತಿಯೊಬ್ಬ ಮಾರುಕಟ್ಟೆಯ ಫ್ಲೈಓವರ್ ಮೇಲಿಂದ ಹಣದ ರಾಶಿಯನ್ನು ಎಸೆದಿದ್ದಾನೆ.
ಮಾರ್ಕೆಟ್ ಸಿಗ್ನಲ್ ಬಳಿ ಜನನಿಬಿಡ ಪ್ರದೇಶದಲ್ಲಿ ವರುಣ್ ಎಂಬಾತ ಹಣವನ್ನು ಎಸೆದಿದ್ದಾರೆ ಮೂರಕ್ಕೂ ಹೆಚ್ಚು ಕಂತೆ 10 ರೂಪಾಯಿ ನೋಟುಗಳನ್ನು ಎಸೆದಿದ್ದಾರೆ.
ಒಟ್ಟಾರೆ ನಾಲ್ಕು ಸಾವಿರ ರೂಪಾಯಿ ಎಸೆದಿದ್ದು, ಜೀವನದಲ್ಲಿ ಜುಗುಪ್ಸೆ ಬಂದು ಹೀಗೆ ಮಾಡಿದ್ದೇನೆ ಎಂದು ಅರುಣ್ ಹೇಳಿಕೊಂಡಿದ್ದಾರೆ. ದುಡ್ಡಿನ ಮಳೆ ಸುರಿಯುತ್ತಿದ್ದಂತೆ ಜನ ಅದನ್ನು ಆರಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದಿದ್ದು, ಯಾವ ಕಾರಣಕ್ಕಾಗಿ ಆತ ಹೀಗೆ ಮಾಡಿದ್ದಾನೆ ಎಂದು ತನಿಖೆ ನಡೆಸುತ್ತಿದ್ದಾರೆ. ಅರುಣ್ ಈವೆಂಟ್ ಮ್ಯಾನೇಜ್‌ಮೆಂಟ್ ಹಾಗೂ ಆಂಕರಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ.