June 28, 2026
Sunday, June 28, 2026
spot_img

ಬಾರದ ಮಳೆ: ಕತ್ತೆಗಳ ಮದುವೆ ಮಾಡಿದ ಉಪ್ಪರಿಗೇನಹಳ್ಳಿ ಗ್ರಾಮಸ್ಥರು

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಭಾನುವಾರ ಹೊಳಲ್ಕೆರೆ ತಾಲೂಕು ಉಪ್ಪರಿಗೆನಹಳ್ಳಿಯಲ್ಲಿ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡುವ ಮೂಲಕ ವರುಣನ ಕೃಪೆಗೆ ಪ್ರಾರ್ಥಿಸಲಾಯಿತು.

ಇಷ್ಟೊತ್ತಿಗೆ ಸಾಕಷ್ಟು ಮಳೆ ಬರಬೇಕಿತ್ತು. ಆದರೆ ವರುಣ ನಮ್ಮ ಮೇಲೆ ಕೃಪೆ ತೋರಲಿಲ್ಲ. ಈ ಹಿನ್ನೆಲೆಯಲ್ಲಿ ಮಳೆ ಬಾರದಿದ್ದಾಗ ಕಪ್ಪೆ ಹಾಗೂ ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ನಮ್ಮ ಅಜ್ಜಂದಿರ ಕಾಲದಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಇಂದು ಹೊಳಲ್ಕೆರೆ ತಾಲೂಕು ಉಪ್ಪರಿಗೆನಹಳ್ಳಿಯಲ್ಲಿ ಕತ್ತೇಗಳ ಮದುವೆ ಮಾಡುವ ವರುಣನ ಆಗಮನಕ್ಕೆ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗುಡಿಗೌಡ್ರು ತಿಪ್ಪೇಸ್ವಾಮಿ, ಮಹೇಶ್, ಮನು, ಪ್ರದೀಪ್, ರಂಗಸ್ವಾಮಿ, ಬಸವರಾಜ್, ಕೆಂಚಪ್ಪ, ಶಿವಮೂರ್ತಿ, ಸಂತೋಷ್, ರಂಗನಾಥ್, ರವಿಕುಮಾರ್ ಭಾಗವಹಿಸಿದ್ದರು. ಗ್ರಾಮಸ್ಥರ ನೇತೃತ್ವದಲ್ಲಿ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !