August 13, 2026
Thursday, August 13, 2026
spot_img

ಜನರ ಫೇವರೆಟ್‌ ʼಕೌನ್‌ ಬನೇಗಾ ಕರೋಡ್‌ಪತಿʼ ಕಾರ್ಯಕ್ರಮದಲ್ಲಿ ಯಶ್‌ ಬಿರುದಿನ ಬಗ್ಗೆ ಪ್ರಶ್ನೆ, ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಜಿಎಫ್‌ ಸಿನಿಮಾದಿಂದ ಇಡೀ ದೇಶಕ್ಕೇ ಫೇಮಸ್‌ ಆಗಿದ್ದ ನಟ ಯಶ್‌ ( Yash) ಇದೀಗ ಟಾಕ್ಸಿಕ್‌ (Toxic) ಸಿನಿಮಾ ಮೂಲಕ ವಿಶ್ವಕ್ಕೇ ಪರಿಚಯವಾಗಲು ಹೊರಟಿದ್ದಾರೆ. ಸೌತ್‌ ಇಂಡಿಯಾದ ನಾಯಕರುಗಳಿಗೆ, ಸಿನಿಮಾಗಳಿಗೆ ಇದೀಗ ಬಾಲಿವುಡ್‌ನಲ್ಲಿಯೂ ಸ್ಪೆಷಲ್‌ ಸ್ಥಾನ ಸಿಗುತ್ತಿದೆ. ಇತ್ತೀಚೆಗಷ್ಟೇ ಬಾಲಿವುಡ್‌ನ ಪ್ರಮುಖ ಶೋ ʼಆಪ್‌ ಕಿ ಅದಾಲತ್‌ʼ ( Aap ki adalat) ನಲ್ಲಿ ನಟ ಯಶ್‌ ಕಾಣಿಸಿಕೊಂಡಿದ್ದರು. ಇದರ ನಂತರ ವರ್ಷ ವರ್ಷಗಳಿಂದ ಜನರು ಇಷ್ಟಪಟ್ಟು ನೋಡುತ್ತಿರುವ ʼಕೌನ್‌ ಬನೇಗಾ ಕರೋಡ್‌ಪತಿʼ( kaun banega karodpati) ಕಾರ್ಯಕ್ರಮದಲ್ಲಿ ನಟ ಯಶ್‌ ಹೆಸರು ಉಲ್ಲೇಖವಾಗಿದೆ.

ಹೌದು, ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಸೌತ್‌ ಸ್ಟಾರ್‌ಗಳ ಕುರಿತ ಪ್ರಶ್ನೆಯೊಂದನ್ನು ರಚಿಸಲಾಗಿದೆ. ನಟ ಯಶ್‌ ಬಿರುದಿನ ಬಗ್ಗೆ ಪ್ರಶ್ನೆ ಕೇಳಿದ್ದು, ಈ ವಿಡಿಯೋ ತುಣುಕು ಎಲ್ಲೆಡೆ ವೈರಲ್‌ ಆಗಿದೆ. ಕೆಬಿಸಿಯಂತಹ ರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ದಿಗ್ಗಜ ನಟರ ಸಾಲಿನಲ್ಲಿ ಯಶ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿರುವುದು ಅವರ ಅಗಾಧ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಪ್ರಶ್ನೆ ಏನು?

ರಜನೀಕಾಂತ್‌ ಸೂಪರ್‌ ಸ್ಟಾರ್‌, ಚಿರಂಜೀವಿ ಮೆಗಾ ಸ್ಟಾರ್‌, ಪವನ್‌ ಕಲ್ಯಾಣ್‌ ಪವರ್‌ ಸ್ಟಾರ್‌ ಎನ್ನುತ್ತಾರೆ. ಹಾಗಿದ್ದರೆ ನಟ ಯಶ್‌ ಅವರನ್ನು ಏನೆಂದು ಕರೆಯುತ್ತಾರೆ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಆಯ್ಕೆಗಳಾಗಿ ಡ್ಯಾನ್ಸಿಂಗ್‌, ರಾಕಿಂಗ್‌, ಫ್ಲೇಮ್‌ಬಾಯಂಟ್‌ ಹಾಗೂ ಡೈನಾಮಿಕ್‌ ಎಂದು ಹೇಳಲಾಗಿತ್ತು. ಇದಕ್ಕೆ ಸ್ಪರ್ಧಿ ರಾಕಿಂಗ್‌ ಎಂದು ಸರಿಯಾಗಿ ಉತ್ತರ ನೀಡಿದ್ದಾರೆ.

ನಂತರ ಅಮಿತಾಬ್‌ ಬಚ್ಚನ್‌ ಯಶ್‌ ಅವರ ಸಿನಿ ಜೀವನದ ಪಯಣವನ್ನು ಹೊಗಳಿದ್ದಾರೆ. ಕೆಜಿಎಫ್ ಸರಣಿಯ ಐತಿಹಾಸಿಕ ಯಶಸ್ಸಿನ ನಂತರ ಯಶ್ ಅವರ ಪ್ರತಿಯೊಂದು ನಡೆಯೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ವರ್ಷ ರಾಯನಾಗಿ, ರಾವಣನಾಗಿ ರಾಕಿಂಗ್‌ ಸ್ಟಾರ್‌ ಯಶ್‌ ಎಲ್ಲರ ಗಮನ ಸೆಳೆಯಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !