August 12, 2026
Wednesday, August 12, 2026
spot_img

ಮಳೆ ಅವಾಂತರ: ನೀರು ತುಂಬಿದ ರಸ್ತೆಗೆ ಬಿದ್ದು 3 ವರ್ಷದ ಕಂದಮ್ಮ ದಾರುಣ ಸಾ*ವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಇಂದು ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದರ ನಡುವೆ, ಮನೆಯ ಹೊರಗಿನ ರಸ್ತೆಯಲ್ಲಿ ತುಂಬಿಕೊಂಡಿದ್ದ ಮಳೆನೀರಿನಲ್ಲಿ ಜಾರಿ ಬಿದ್ದ 3 ವರ್ಷದ ಹೆಣ್ಣು ಮಗುವೊಂದು ದಾರುಣವಾಗಿ ಸಾವನ್ನಪ್ಪಿದೆ.

ಮೃತಪಟ್ಟ ಬಾಲಕಿಯನ್ನು ವಿಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೋದಯ ನಗರದ ನಿವಾಸಿ ಮಾನ್ವಿ ಎಂದು ಗುರುತಿಸಲಾಗಿದೆ. ಭಾರಿ ಮಳೆಯಿಂದಾಗಿ ಇಡೀ ಗಲ್ಲಿಯಲ್ಲಿ ಮೊಣಕಾಲುದ್ದದ ನೀರು ತುಂಬಿಕೊಂಡಿತ್ತು. ರಸ್ತೆಯಲ್ಲಿದ್ದ ನೀರಿನ ಆಳ ಅರಿಯದ ಮಗು ಕಾಲು ಜಾರಿ ಒಳಗೆ ಬಿದ್ದಿದೆ. ಮಗು ಕಾಣಿಸುತ್ತಿಲ್ಲ ಎಂದು ಪೋಷಕರು ಹುಡುಕಾಡಿದಾಗ, ನೆರೆಹೊರೆಯವರು ಮಗುವಿನ ದೇಹ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಹೊರತೆಗೆದಿದ್ದಾರೆ. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಮಗು ಈಗಾಗಲೇ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:

ಈ ಜಲಾವೃತ ಸಮಸ್ಯೆಯ ವಿರುದ್ಧ ಸ್ಥಳೀಯ ನಿರಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಳೆಯಿಂದಾಗಿ ಉಂಟಾಗಿರುವ ಜಂಜಾಟವನ್ನು ನಿಯಂತ್ರಿಸಲು ಘಾಜಿಯಾಬಾದ್ ಜಿಲ್ಲಾಡಳಿತವು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !