ಹೊಸದಿಗಂತ ವರದಿ ವಿಜಯಪುರ:
ಲಕ್ಷಾಂತರ ಮೌಲ್ಯದ ಒಣದ್ರಾಕ್ಷಿ ವಂಚನೆ ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ವ್ಯಾಪಾರಸ್ಥರಿಂದ ಒಣ ದ್ರಾಕ್ಷಿ ಖರೀದಿಸಿ ಹಣ ನೀಡದೆ ವಂಚಿಸಿದ, ಕಮಲಕುಮಾರ ಸೋಹನಲಾಲ್, ಸಚಿನ್ ಮಹೇಂದ್ರಕುಮಾರ ಪಟೇಲ್, ಸುನೀಲ್, ಜಯೇಶ್, ಭರತ ಪಟೇಲ್, ನೀಲ್ ಪಟೇಲ್, ರೋಣಿಕಕುಮಾರ್ ಪಟೇಲ್, ಪಿಂಕೇಶ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಆರೋಪಿಗಳ ಪೈಕಿ ಕಮಲಕುಮಾರ ಸೋಹನಲಾಲ್ ನನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಯಿಂದ 2.2 ಕೋಟಿ ಮೌಲ್ಯದ 117 ಟನ್ ಒಣದ್ರಾಕ್ಷಿ ಜಪ್ತಿ ಮಾಡಲಾಗಿದ್ದು, ಎಂಟು ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.