Friday, June 2, 2023

Latest Posts

ರಾಜ್ ಠಾಕ್ರೆಯ ಒಂದು ಟ್ವೀಟ್: ಸಮುದ್ರದಲ್ಲಿ ನಿರ್ಮಾಣವಾಗುತ್ತಿದ್ದ ಅಕ್ರಮ ದರ್ಗಾ ನೆಲಸಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ದರ್ಗಾದ (Dargah) ಕುರಿತು ಸಿಡಿದೆದ್ದ ನವನಿರ್ಮಾಣ ಸೇನೆ (MNS) ನಾಯಕ ರಾಜ್ ಠಾಕ್ರೆ (Raj Thackeray) ಟ್ವೀಟ್ ಒಂದನ್ನು ಹಂಚಿಕೊಂಡಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಗುರುವಾರ ಮಾಹಿಮ್ ಕರಾವಳಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ದರ್ಗಾವನ್ನು ಕೆಡವಿ ಹಾಕಿದೆ.

ಮಾಹಿಮ್ ಕರಾವಳಿ ಪ್ರದೇಶದಲ್ಲಿ ಅನಧಿಕೃತವಾಗಿ ದರ್ಗಾವನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಡ್ರೋನ್ ಕ್ಯಾಮೆರಾದಲ್ಲಿ ತೆಗೆಯಲಾಗಿದ್ದ ದೃಶ್ಯಗಳನ್ನು ಟ್ವಿಟ್ಟರ್‌ನಲ್ಲಿ ರಾಜ್ ಠಾಕ್ರೆ ಅವರು ಹಂಚಿಕೊಂಡಿದ್ದರು. ಠಾಕ್ರೆ ಟ್ವೀಟ್ ಮಾಡಿದ ಕೇವಲ 1 ದಿನದ ಬಳಿಕ ಮುಂಬೈ ನಾಗರಿಕ ಮಂಡಳಿ ಅಕ್ರಮ ದರ್ಗಾವನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದೆ.

ರಾಜ್ ಠಾಕ್ರೆ ಮಾಡಿರುವ ಟ್ವೀಟ್‌ನಲ್ಲಿ, ಮಾಹಿಮ್‌ನ ಮಗ್ದೂಮ್ ಬಾಬಾ ದರ್ಗಾವನ್ನು ಸಮುದ್ರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿದೆ. 2 ವರ್ಷಗಳ ಹಿಂದೆ ಇಲ್ಲಿ ಏನೂ ಇರಲಿಲ್ಲ. ದರ್ಗಾ ನಿರ್ಮಾಣದ ಕಾರ್ಯಾಚರಣೆ ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದರೂ ಇದು ಪೊಲೀಸರ ಹಾಗೂ ಪುರಸಭೆಯ ಗಮನಕ್ಕೆ ಬಂದಿಲ್ಲವೇ ಎಂದು ಟೀಕಿಸಿದ್ದರು.

ಇದರ ಜೊತೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಪೊಲೀಸರಿಗೆ ವಾರ್ನಿಗ್ ನೀಡಿದ ರಾಜ್ ಠಾಕ್ರೆ, ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ದರ್ಗಾದ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಿ. ಇದನ್ನು ನೆಲಸಮಗೊಳಿಸಿ. ಇಲ್ಲದೇ ಹೋದಲ್ಲಿ ನಾವು ಆ ಪ್ರದೇಶದಲ್ಲಿ ದೊಡ್ಡ ಗಣಪತಿಯ ದೇವಾಲಯವನ್ನು ನಿರ್ಮಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಬೆಳಗ್ಗೆ ಬಿಎಂಸಿ ತಂಡ ಹೆಚ್ಚಿನ ಭದ್ರತೆಯೊಂದಿಗೆ ಸಣ್ಣ ದ್ವೀಪ ಮಾದರಿಯ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದ ದರ್ಗಾದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಬಿಎಂಸಿ ತಂಡ ಭಾರೀ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜೆಸಿಬಿ ಹಾಗೂ ಇತರ ಸಲಕರಣೆಗಳೊಂದಿಗೆ ಸ್ಥಳಕ್ಕೆ ತೆರಳಿ ದರ್ಗಾವನ್ನು ನೆಲಸಮಗೊಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!