ನವಜೋತ್ ಸಿಂಗ್ ಸಿಧು ಪತ್ನಿಗೆ ಕ್ಯಾನ್ಸರ್: ಜೈಲಿನಲ್ಲಿರುವ ಪತಿಯೊಂದಿಗೆ ನೋವು ಹಂಚಿಕೊಂಡ ಕೌರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಸದ್ಯ ಜೈಲಿನಲ್ಲಿದ್ದು, ಇದರ ನಡುವೆ ಇತ್ತ ಅವರ ಪತ್ನಿಗೆ ಕ್ಯಾನ್ಸರ್ (Cancer) ಇರುವುದು ಪತ್ತೆಯಾಗಿದೆ.

ಈ ಕುರಿತು ಟ್ವಿಟರ್‌ನಲ್ಲಿ ನವಜೋತ್ ಕೌರ್ (Navjot Kaur) ವಿಷಯ ಹಂಚಿಕೊಂಡಿದ್ದು, ನವಜೋತ್ ಎಸ್ ಸಿಧು ಮಾಡದ ಅಪರಾಧಕ್ಕಾಗಿ ಜೈಲಿನಲ್ಲಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನು ಕ್ಷಮಿಸಿ. ಹೊರಗೆ ಪ್ರತಿ ದಿನ ನಿಮಗಾಗಿ ಕಾಯುತ್ತಿರುವವರು ಬಹುಶಃ ನಿಮಗಿಂತ ಹೆಚ್ಚು ಬಳಲುತ್ತಿದ್ದಾರೆ. ಎಂದಿನಂತೆ ನಿಮ್ಮ ನೋವನ್ನು ದೂರ ಮಾಡಲು ಪ್ರಯತ್ನಿಸುತ್ತಾ, ನೋವನ್ನು ಹಂಚಿಕೊಳ್ಳುವೆ. ಸಣ್ಣದೊಂದು ಗಡ್ಡೆ ಕಂಡಿದೆ, ಅದು ಒಳ್ಳೆಯದಲ್ಲ ಎಂದು ಗೊತ್ತಿತ್ತು.ನಿನಗಾಗಿ ಕಾಯುತ್ತಿದ್ದೆ, ನಿನಗೆ ನ್ಯಾಯವನ್ನು ಪದೇ ಪದೇ ನಿರಾಕರಿಸುವುದನ್ನು ನೋಡಿರುವೆ. ಸತ್ಯ ತುಂಬಾ ಶಕ್ತಿಯುತವಾಗಿದೆ. ಆದರೆ ಅದು ನಿಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸುತ್ತಿದೆ, ಕಲಿಯುಗ. ಕ್ಷಮಿಸಿ ನಿಮಗಾಗಿ ಕಾಯಲು ಸಾಧ್ಯವಿಲ್ಲ ಏಕೆಂದರೆ ಇದು 2ನೇ ಹಂತದ ಗಂಭೀರ ಕ್ಯಾನ್ಸರ್ ಆಗಿದೆ. ಇಂದು ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದೇನೆ. ಯಾರನ್ನೂ ದೂಷಿಸಬೇಕಾಗಿಲ್ಲ ಏಕೆಂದರೆ ಇದು ದೈವ ನಿಶ್ಚಯ,ಅದು ಸರಿಯಾಗಿದೆ ಎಂದು ಕೌರ್ಮಾ ಪತಿಗೆ ಪತ್ರ ಮೂಲಕ ನೋವನ್ನು ತಿಳಿಸಿದ್ದಾರೆ.

ನವಜೋತ್ ಸಿಂಗ್ ಸಿಧು 1988 ರ ರೋಡ್ ಜಗಳ ಸಾವಿನ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದು ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!