ಜಾಮೀನು ಪಡೆದ ಎರಡನೇ ದಿನದಲ್ಲಿ ಮತ್ತೆ ರಾಜಾ ಸಿಂಗ್ ಬಂಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಬಂಧನವಾಗಿದ್ದ ರಾಜಾ ಸಿಂಗ್ ಇದೀಗ ಮತ್ತೆ ಬಂಧನಕ್ಕೊಳಗಾಗಿದ್ದಾರೆ.
ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದಿದ್ದ ಟಿ ರಾಜಾ ಸಿಂಗ್‌ರನ್ನು ಹೈದರಾಬಾದ್ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಎರಡನೇ ಬಾರಿ ರಾಜಾ ಸಿಂಗ್ ಬಂಧವನ್ನು ವಕೀಲ ಕೌನಾ ಸಾಗರ್ ಖಚಿತಪಡಿಸಿದ್ದಾರೆ.
ಆದರೆ ಈ ಬಾರಿ ಫೆಬ್ರವರಿ ಹಾಗೂ ಎಪ್ರಿಲ್ ತಿಂಗಳಲ್ಲಿನ ಪ್ರಕರಣ ಸಂಬಂಧ ರಾಜಾ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 24 ರಂದು ರಾಜಾ ಸಿಂಗ್‌ಗೆ ನೋಟಿಸ್ ನೀಡಿತ್ತು. ಎಪ್ರಿಲ್ ತಿಂಗಳಲ್ಲಿ ರಾಜಾ ಸಿಂಗ್ ವಿಡಿಯೋ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಎಪ್ರಿಲ್ ತಿಂಗಳಲ್ಲಿ ಟಿ ರಾಜಾ ಸಿಂಗ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿತ್ತು. ಎರಡೂ ವಿವಾದಾತ್ಮಕ ಹೇಳಿಕೆಗೆ ಪ್ರಕರಣ ದಾಖಲಾಗಿತ್ತು.

ಎಪ್ರಿಲ್ ತಿಂಗಳಲ್ಲಿ ನಡೆದ ಶೋಭ ಯಾತ್ರೆ ವೇಳೆ ವಿವಾದಾತ್ಮ ಹೇಳಿಕೆ ನೀಡಿದ ಕಾರಣಕ್ಕೆ ಎರಡನೇ ಪ್ರಕರಣ ದಾಖಲಾಗಿತ್ತು. ಈ ವೇಳೆ ಧರ್ಮ ಕುರಿತು ಅವಹೇಳನ ಹೇಳಿಕೆ ನೀಡಿದ್ದರು. ಈ ಎರಡು ಪ್ರಕರಣ ಕುರಿತು ಇದೀಗ ಟಿ ರಾಜಾ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!