ರಸ್ತೆ ಬದಿಗೆ ಉರುಳಿದ ರಾಜಹಂಸ ಬಸ್: ಪ್ರಯಾಣಿಕರಿಗೆ ಗಾಯ

ಹೊಸದಿಗಂತ ವರದಿ, ಬೀದರ್:

ಜಿಲ್ಲೆಯ ಹುಮನಾಬಾದ್ ತಾಲೂಕಿನ ತಾಳಮಡಗಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ೬೫ರ ಮೇಲೆ ಕಲಬುರ್ಗಿ ಕಡೆಯಿಂದ ಹೈದರಾಬಾದ್ ಕಡೆಗೆ ಹೋಗುತ್ತಿದ್ದ ರಾಜಹಂಸ ಬಸ್ ರಸ್ತೆ ಬದಿಗೆ ಉರುಳಿದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಮೂವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾರಿಗೂ ಜೀವಹಾನಿ ಆಗಿಲ್ಲ, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!