ಆ ನಟನೇ ನನಗೆ ಸ್ಫೂರ್ತಿ ಎಂದ ರಾಜಮೌಳಿ, ಯಾರು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಹುಬಲಿ ಚಿತ್ರದ ಮೂಲಕ ಇಡೀ ವಿಶ್ವವೇ ನಮ್ಮತ್ತ ನೋಡುವಂತೆ ಮಾಡಿದ ಜಕ್ಕಣ್ಣ. ‘RRR’ ಮೂಲಕ ಮತ್ತಷ್ಟು ಕ್ರೇಜ್‌ ಹೆಚ್ಚಿಸಿಕೊಂಡರು. ಪ್ರಸ್ತುತ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಭಾರತೀಯ ಚಲನಚಿತ್ರೋದ್ಯಮವನ್ನು ಪ್ರತಿನಿಧಿಸುತ್ತಿದ್ದಾರೆ.

ರಾಜಮೌಳಿ ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾ ಪ್ಲಾನ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ‌ ಜೊತೆ ಎಂದು ಬಹಿರಂಗಪಡಿಸಿದರು.  ಜೊತೆಗೆ ಸ್ಪೆಷಲ್‌ ಎಫೆಕ್ಟ್‌ಗಳ ಬಗ್ಗೆ ಇಷ್ಟೊಂದು ಯೋಚಿಸೋಕೆ ಒಬ್ಬ ನಟ ನನಗೆ ಸ್ಪೂರ್ತಿ ಎಂದೂ ಸಹ ಹೇಳಿದ್ದಾರೆ. “ನನ್ನ ಚಲನಚಿತ್ರಗಳಲ್ಲಿ ಭಾವನಾತ್ಮಕತೆ ತುಂಬಲು ವಿಶೇಷ ಎಫೆಕ್ಟ್‌ಗಳನ್ನು ಬಳಕೆ ಮಾಡಿಕೊಂಡಿದ್ದೇನೆ. ಆಗ ಮಾತ್ರ ಪ್ರೇಕ್ಷಕರು ದೃಶ್ಯದ ಭಾವನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಈ ವಿಚಾರವನ್ನು ಕಂಡುಕೊಂಡ ನಾನು ಅಂದಿನಿಂದ ವಿಭಿನ್ನ ಮತ್ತು ವಿಶೇಷವಾಗಿ ಸಿನಿಮಾ ಚಿತ್ರೀಕರಣಕ್ಕೆ ಮುಂದಾದೆ ಎಂಬ ಮಾತನನು ಹೇಳಿದರು.

ಇದಕ್ಕೆ ನನ್ನ ಮುಖ್ಯ ಸ್ಫೂರ್ತಿ ಹಾಲಿವುಡ್ ನಟ ಮತ್ತು ನಿರ್ದೇಶಕ “ಮೆಲ್ ಗಿಬ್ಸನ್”. ಅವರ ಚಿತ್ರಗಳು ಸಾರ್ವತ್ರಿಕ ಭಾವನಾತ್ಮಕ ಆಕರ್ಷಣೆಯನ್ನು ಹೊಂದಿರುತ್ತವೆ. ಅವುಗಳನ್ನು ಗುರುತಿಸುವ ರೀತಿಯಲ್ಲಿ ಅವರ ಮಾಡುವ ಕೆಲಸಕ್ಕೆ ಎಷ್ಟು ಕೃತಜ್ಞತೆ ತಿಳಿಸಿದರೂ ಸಾಲದು ಎಂದು ರಾಜಮೌಳಿ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!