ನೀವೂ ಹೆಮ್ಮೆಯಿಂದ ಹೇಳಿ, ನನ್ನ ಮಕ್ಕಳು ಕಾಡಲ್ಲಿದ್ದಾರೆ ಅಂತ!!

  • ಮೇಘನಾ ಶೆಟ್ಟಿ, ಶಿವಮೊಗ್ಗ

ಮಕ್ಕಳನ್ನ ದತ್ತು ತಗೊಳ್ಳೋದು ಕೇಳಿದ್ದೀವಿ, ಮರಗಳನ್ನು ದತ್ತು ತಗೊಲ್ಳೋದು ಕೇಳಿದ್ದೀರಾ…

ಎಂದಾದರೂ ಯೋಚನೆ ಮಾಡಿದ್ದೀರಾ? ಗಿಡಗಳನ್ನೂ ದತ್ತು ಪಡೆಯಬಹುದು ಅಂತಾ? ಅವಕ್ಕೂ ಜೀವ ಇದೆ ಅಲ್ವಾ? ಅವಕ್ಕೂ ಆಹಾರ ಬೇಕು ಅಲ್ವಾ? ಸಾಮಾನ್ಯವಾಗಿ ಗಿಡಗಳು ಅಥವಾ ಮರಗಳು ಹಾಳಾಗ್ತಾ ಇದ್ರೆ, ಬಿದ್ದು ಹೋಗ್ತಾ ಇದ್ರೆ ಜಾಸ್ತಿ ತಲೆ ಕೆಡಿಸಿಕೊಳ್ಳೋದಿಲ್ಲ, ಯಾರೋ ನೋಡ್ತಾರೆ ಬಿಡಿ ಅಂತ ಮುಂದೆ ಹೋಗಿಬಿಡ್ತೇವೆ.

ಆದರೆ ಇಲ್ಲೊಬ್ಬ ವ್ಯಕ್ತಿ ಎಲ್ಲರೂ ಇದು ನಮ್ಮ ಕೆಲಸ ಅಲ್ಲ ಅಂತ ಬಿಟ್ಟು ಹೋದ್ರೆ ಇದನ್ನು ಮಾಡೋರು ಯಾರು ಅಂತ ಪ್ರಶ್ನಿಸಿದ್ದಾರೆ? ಮಕ್ಕಳ ರೀತಿ ಗಿಡಗಳನ್ನು ದತ್ತು ಪಡೆದು, ಹೆಮ್ಮೆಯ ಪೋಷಕರಾಗಿ ಅಂತ ಆಹ್ವಾನಿಸ್ತಾ ಇದ್ದಾರೆ.

ವೆಸ್ಟ್ ಬೆಂಗಾಲ್‌ನ ಶಾಂತಿನಿಕೇತನ್, ವೃತ್ತಿಯಲ್ಲಿ ಫಿಲಂ ಮೇಕರ್. ಆದರೆ ನೆಚ್ಚಿನ ಕೆಲಸ ಗಿಡಗಳನ್ನು ನೆಡುವುದು, ಬೆಳೆಸುವುದು ಹಾಗೂ ಉಳಿಸುವುದು.

The unflattering reality of India's lofty plans for its forests - Carbon  Copyಶಾಂತಿನಿಕೇತನ್ ಕಾಡೊಂದರಲ್ಲಿ ಡಾಕ್ಯುಮೆಂಟರಿ ಶೂಟ್ ಮಾಡುವಾಗ, ಕಾಡು ಉಳಿಯಬೇಕು, ಹೊಸ ಗಿಡಗಳನ್ನು ನೆಡಬೇಕು ಅನ್ನೋ ಆಲೋಚನೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ರು.

ಕೋವಿಡ್ ಸಮಯ ನೆನಪಿದ್ಯಾ? ಜನರಿಗೆ ಜನರೇ ಆಗಬೇಕಿತ್ತು. ಎಲ್ಲರೂ ಹೆದರಿಕೊಂಡು ಸಾಯುವ ಪರಿಸ್ಥಿತಿಗೆ ಬಂದು ತಲುಪಿದ್ವಿ. ಮುಂದೆ ಕೂಡ ಇದೇ ಆಗಲಿದೆ. ಪರಿಸರ ನಮ್ಮ ಅವಿಭಾಜ್ಯ ಅಂಗ, ಅದಿಲ್ಲದಿದ್ದರೆ ನಾವಿಲ್ಲ. ಈಗ ರಕ್ಷಣೆ ಮಾಡದಿದ್ದರೆ ಬದುಕುವುದೇ ಅಸಾಧ್ಯ ಎನ್ನುತ್ತಾರೆ ಶಾಂತಿನಿಕೇತನ್.

Bird's Eye View of India's Forests Misses Budding Crisis of Small-Scale  Changes – The Wire Scienceಮರಗಳನ್ನು ಉಳಿಸುವುದು ಒಂದು ವ್ಯಕ್ತಿ ಕೆಲಸ ಅಲ್ಲ, ಅವುಗಳ ಪೋಷಣೆಗೆ ಜನ ಬೇಕು. ಮಕ್ಕಳಂತೆ ಅವುಗಳನ್ನು ಸಾಕಬೇಕು. ಮಕ್ಕಳನ್ನು ದತ್ತು ಪಡೆಯುವ ಹಾಗೆ ಗಿಡಗಳನ್ನು ದತ್ತು ಪಡೆಯುವ ಆಲೋಚನೆಯಲ್ಲಿ ಬ್ರಿಕ್ಕೋ ಫೌಂಡೇಷನ್ ಜಾರಿಗೆ ಬಂತು. ಈ ಫೌಂಡೇಷನ್ ಮೂಲಕ ಜನರಿಗೆ ಗಿಡಗಳನ್ನು ದತ್ತು ನೀಡಲಾಗುತ್ತದೆ.

Need to reorient or shift incentives to protect, promote trees outside  forests: WRI India study - Jammu Kashmir Latest News | Tourism | Breaking  News J&Kದತ್ತು ಪಡೆಯೋದು ಹೇಗೆ?
ನಿಮ್ಮಿಷ್ಟದ ಗಿಡಗಳನ್ನ ನೀವೇ ಆರಿಸಬಹುದು.
ಮಕ್ಕಳಿಗೆ ಹೆಸರಿಡುವಂತೆ ಅವುಗಳಿಗೂ ಹೆಸರಿಡಿ.
ಚಿಕ್ಕಮಟ್ಟದ ಹಣ ಡೊನೇಶನ್‌ನಂತೆ ನೀಡಿ.
ನಂತರ ಈ ಗಿಡವನ್ನು ಫೌಂಡೇಷನ್‌ನ ಭೂಮಿಯಲ್ಲಿ ನಡೆಲಾಗುತ್ತದೆ.
ಸ್ವಯಂ ಸೇವಕರು ಗಿಡಗಳ ರಕ್ಷಣೆ ಮಾಡುತ್ತಾರೆ.
ಮಕ್ಕಳನ್ನು ನೋಡಬೇಕು ಎನಿಸಿದಾಗೆಲ್ಲ, ಬಂದು ನೋಡಿಕೊಂಡು ಹೋಗಬಹುದು.

ಎಲ್ಲೆಲ್ಲೋ ಗಿಡಗಳನ್ನು ಬೆಳೆಸಿದಾಗ, ಯಾವುದೋ ಕಾರಣದಿಂದ ಅದು ನಾಶವಾಗುವ ಸಾಧ್ಯತೆ ಇದೆ, ಆದರೆ ಕಾಡುಗಳಲ್ಲಿ ಬೆಳೆಸಿದರೆ ಅವು ಉಳಿಯುವ ಸಾಧ್ಯತೆ ಹೆಚ್ಚಿದೆ. ಬ್ರಿಕ್ಕೋ ಫೌಂಡೇಷನ್ ಈವರೆಗೆ 100 ಕ್ಕೂ ಹೆಚ್ಚು ಗಿಡಗಳನ್ನು ದತ್ತು ನೀಡಿದೆ.

ಇದೆಂತಾ ಹೊಸಾ ಐಡಿಯಾ ಅಲ್ವಾ? ಗಿಡಗಳ ಬಗ್ಗೆ ಇಷ್ಟೊಂದು ಆಲೋಚನೆ ಮಾಡುತ್ತಾರೆ ಎಂದರೆ ಇದಕ್ಕೆ ಬೆಂಬಲ ನೀಡುವುದು ನಮ್ಮ ಜವಾಬ್ದಾರಿ ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!