ರಾಜಕೀಯ ಪ್ರವೇಶದ ಕುರಿತು ರಿಷಬ್ ಶೆಟ್ಟಿ ಕೊಟ್ರು ಇಂಟ್ರೆಸ್ಟಿಂಗ್ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಮೂಲಕ ಜನಮೆಚ್ಚಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಇತ್ತೀಚಿನ ದಿನಗಳಲ್ಲಿ ಏನು ಮಾಡಿದ್ರು ಸುದ್ದಿಯಾಗುತ್ತಾರೆ.

ಕಾಂತಾರ ಸಿನಿಮಾವನ್ನು ದೊಡ್ಡ ಸಂಖ್ಯೆಯ ಸಿನಿಮಾ ಪ್ರೇಮಿಗಳು ನೋಡಿ ಮೆಚ್ಚಿಕೊಂಡಿದ್ದಾರೆ. ಇದರಿಂದರಿಷಬ್ ಶೆಟ್ಟಿಯನ್ನು ಒಂದು ಪಕ್ಷದ ವಕ್ತಾರನಂತೆ ಬಿಂಬಿಸಿದ ಉದಾಹರಣೆಗಳೂ ಇವೆ. ಇದೆಲ್ಲದರ ನಡುವೆ ಇಂದು ರಿಷಬ್ ಶೆಟ್ಟಿ ಹಠಾತ್ತನೇ ತಮ್ಮ ರಾಜಕೀಯ (Politics) ಪ್ರವೇಶದ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ, ವಿಶ್ವಸಂಸ್ಥೆಗೆ ಹೋಗಿದ್ದಾಗ ಅಲ್ಲಿ ತೆಗೆಸಿಕೊಂಡಿದ್ದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಮೋದಿ ಜಾಕೆಟ್ ಮಾದರಿಯ ನೀಲಿ ಬಣ್ಣದ ಜಾಕೆಟ್ ಧರಿಸಿ ಬಿಳಿ ಬಣ್ಣದ ಕುರ್ತಾ ಧರಿಸಿ ಥೇಟ್ ರಾಜಕಾರಣಿಯಂತೆ ಕಾಣುತ್ತಿದ್ದರು.

ಪತ್ರಕರ್ತೆಯೊಬ್ಬರು ರಿಷಬ್ ಅವರ ಅದೇ ಚಿತ್ರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡು, ರಿಷಬ್ ಶೆಟ್ಟಿ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅವರು ಈ ಪೋಸ್ಟ್ ಅನ್ನು ಏಪ್ರಿಲ್ ಫೂಲ್ ಮಾಡಲೆಂದು ತಮಾಷೆಗೆ ಹಂಚಿಕೊಂಡಿದ್ದರು.

ಪತ್ರಕರ್ತೆಯ ಟ್ವೀಟ್​ಗೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ”ಸುಮ್ಮನೆ ಇರಿ ಮಾರಾರ್ಯೆ, ಸುಳ್ಳು ಸುದ್ದಿ ಇದು, ಏಪ್ರಿಲ್ 1 ಎಂದು ಸ್ಪಷ್ಟವಾಗಿ ಹೇಳಿ. ಮೊದಲೇ ಕೆಲವರು ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿಬಿಟ್ಟಿದ್ದಾರೆ. ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲಎಂದಿದ್ದಾರೆ.

ರಿಷಬ್ ಶೆಟ್ಟರ ಈ ಟ್ವೀಟ್​ಗೆ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸಿ ‘ಬನ್ನಿ ಶೆಟ್ರೆ, ನನ್ನ ಫುಲ್ ಬೆಂಬಲ ನಿಮಗೆ’ ಎಂದಿದ್ದಾನೆ. ಆ ವ್ಯಕ್ತಿಗೂ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ, ‘ಬೇಡ ದೇವ್ರು ನನ್ನ ಸಿನಿಮಾಕ್ಕೆ ನಿಮ್ಮ ಬೆಂಬಲ ಇದ್ರೆ ಸಾಕು’ ಎಂದಿದ್ದಾರೆ.

ರಿಷಬ್ ಶೆಟ್ಟಿಯವರ ರಾಜಕೀಯದ ಪ್ರವೇಶದ ಬಗ್ಗೆ ಅಥವಾ ರಾಜಕೀಯ ಪಕ್ಷವೊಂದಕ್ಕೆ ಬೆಂಬಲ ನೀಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಸ್ವತಃ ರಿಷಬ್ ಶೆಟ್ಟಿಯವರು ಎಲ್ಲ ಊಹಾಪೋಹಗಳಿಗೆ ಟ್ವೀಟ್​ ಮೂಲಕ ತೆರೆ ಎಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!