ಕೃಷ್ಣ ಮಂದಿರ ನಿರ್ಮಾಣ ಆಗುವವರೆಗೆ ದಿನಕ್ಕೊಂದೇ ಹೊತ್ತು ಊಟ: ರಾಜಸ್ಥಾನ ಸಚಿವನಿಂದ ಪ್ರತಿಜ್ಞೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುವರ್ಷದ ಕನಸು ನನಸಾಗಿದ್ದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಭಗವಾನ್ ಕೃಷ್ಣನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸುವವರೆಗೆ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುವುದಾಗಿ ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಸೋಮವಾರ ಹೇಳಿದ್ದಾರೆ.

ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸದಿದ್ದರೆ, ಇಂದಿನಿಂದ ನಾನು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತೇನೆ ಎಂದು ದಿಲಾವರ್ ಅವರು ಕೋಟಾದ ತಮ್ಮ ಕ್ಷೇತ್ರವಾದ ರಾಮಗಂಜ್ ಮಂಡಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದರು.

ಆರು ಬಾರಿ ಶಾಸಕರಾಗಿ ಮತ್ತು ಮೂರು ಬಾರಿ ಸಚಿವರಾಗಿದ್ದ ದಿಲಾವರ್ ಅವರು ಫೆಬ್ರವರಿ 1990 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವವರೆಗೆ ತಾನು ಹಾರ, ಬೊಕ್ಕೆ ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
ಸೋಮವಾರ, ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮುಗಿದ ನಂತರ ಅವರ ಬೆಂಬಲಿಗರು ಅವರಿಗೆ 34 ಕೆಜಿ ಹಾರ, ಇನ್ನೊಂದು 108 ಅಡಿ ಉದ್ದದ ಹಾರ ಅರ್ಪಿಸಿದರು. ಆದರೆ ಜನವರಿ 31 ರಂದು ಅಯೋಧ್ಯೆಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅದನ್ನು ಸ್ವೀಕಸುವುದಾಗಿ ಹೇಳಿ ದಿಲಾವರ್ ಅದನ್ನು ಸ್ವೀಕರಿಸಲು ನಿರಾಕರಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!