ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜಸ್ಥಾನ ಕೋಟಾದ 19 ವರ್ಷದ ನಂದಿನಿ ಗುಪ್ತಾ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2023ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಶನಿವಾರ ಮಣಿಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 19 ವರ್ಷದ ನಂದಿನಿ ಗುಪ್ತಾ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023’ರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಆಪ್ ಹಾಗೂ ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ ಎರಡನೇ ರನ್ನರ್ ಆಗಿ ಹೊರಹೊಮ್ಮಿದ್ದಾರೆ.
ಭಾರತದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯ 59ನೇ ಆವೃತ್ತಿಯಲ್ಲಿ ನಂದಿನಿ ಭಾರತದ ಹೊಸ ಸೌಂದರ್ಯ ರಾಣಿ ಕಿರೀಟವನ್ನು ಪಡೆದರು. ರ್ಯಕ್ರಮದಲ್ಲಿ ಹಲವು ಸಿನಿ ಗಣ್ಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 29 ರಾಜ್ಯಗಳ ಸುಂದರಿಯರು ಸ್ಪರ್ಧಿಸಿದ್ದರು.
ಕಳೆದ ವರ್ಷ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಕರ್ನಾಟಕದ ಸಿನಿ ಶೆಟ್ಟಿಗೆ ಒಲಿದು ಬಂದಿತ್ತು.
ನಂದಿನಿ ಗುಪ್ತಾ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಶ್ವ ಸುಂದರಿ ಸ್ಪರ್ಧೆಯ 71 ನೇ ಆವೃತ್ತಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ವರ್ಷ ನಡೆಯಲಿದೆ.