ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಅಂತಾ ಬಾಣಸವಾಡಿಯ ಜನಪ್ರಿಯ ಆಸ್ಪತ್ರೆಯಲ್ಲಿ ರಾಜೇಶ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಭರತ್ ಹೇಳಿದ್ದಾರೆ.
ನಟ ರಾಜೇಶ್ ಅವರನ್ನು ಬೆಂಗಳೂರಿನ ಬಾಣಸವಾಡಿಯ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರಾಜೇಶ್ಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ವೈದ್ಯರು ಮಾತನಾಡಿ, 9ನೇ ತಾರೀಖು ರಾಜೇಶ್ ಆಸ್ಪತ್ರೆಗೆ ದಾಖಲಾಗಿದರು. ಅವರಿಗೆ ಉಸಿರಾಟದ ಸಮಸ್ಯೆ ಇತ್ತು.ಐಸಿಯುನಲ್ಲಿ ರಾಜೇಶ್ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.
ರಾಜೇಶ್ ಅವರ ಕಿಡ್ನಿ, ಹಾರ್ಟ್ ಗುಡ್ ಕಂಡಿಶನ್ನಲ್ಲಿದೆ. ಶುಗರ್, ಬಿಪಿ ಕೂಡ ನಾರ್ಮಲ್ ಆಗಿದೆ. ಇನ್ಫೆಕ್ಷನ್ನಿಂದ ಲಂಗ್ಸ್ ಎಫೆಕ್ಟ್ ಆಗಿ ಉಸಿರಾಟದ ಸಮಸ್ಯೆ ಆಗಿದೆ. ಆಂಟಿಬಯೋಟಿಕ್ ಕೊಟ್ಟು ಐಸಿಯೂನಲ್ಲಿ ಚಿಕಿತ್ಸೆ ಕೊಡ್ತಿದ್ದೇವೆ. ನಮ್ಮ ಚಿಕಿತ್ಸೆಗೆ ರಾಜೇಶ್ ಅವರು ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.