ಖ್ಯಾತ ಕ್ರಿಕೆಟರ್​ ಬಯೋಪಿಕ್​ ಮಾಡಲು ಹೊರಟ ರಾಜ್​ಕುಮಾರ್​ ಹಿರಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘3 ಈಡಿಯಟ್ಸ್​’, ‘ಸಂಜು’, ‘ಮುನ್ನಾಭಾಯ್​ ಎಂಬಿಬಿಎಸ್​’, ‘ಲಗೇರಹೋ ಮುನ್ನಾಭಾಯ್​’, ‘ಪಿಕೆ’ ಅಂತಹ ಹಿಟ್ ಮೂವಿ ನೀಡಿದ ಬಾಲಿವುಡ್ ನಿರ್ದೇಶಕ ರಾಜ್​ಕುಮಾರ್​ ಹಿರಾನಿ (Rajkumar Hirani) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಈಗ ಅವರು ಶಾರುಖ್​ ಖಾನ್​ ಜೊತೆ ‘ಡಂಕಿ’ (Dunki Movie) ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಬಳಿಕ ಅವರು ಯಾವ ಪ್ರಾಜೆಕ್ಟ್​ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಬಗ್ಗೆ ಸುದ್ದಿ ಕೇಳಿಬಂದಿದೆ. ಮಾಜಿ ಕ್ರಿಕೆಟರ್​ ಲಾಲಾ​ ಅಮರನಾಥ್​ (Lala Amarnath) ಜೀವನದ ಕುರಿತು ರಾಜ್​ಕುಮಾರ್​ ಹಿರಾನಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಯೋಪಿಕ್​ ತುಂಬ ಡಿಫರೆಂಟ್​ ಆಗಿ ಮೂಡಿಬರಲಿದೆ.

ಭಾರತಕ್ಕಾಗಿ 24 ಟೆಸ್ಟ್​ ಪಂದ್ಯಗಳನ್ನು ಆಡಿದ ಕೀರ್ತಿ ಲಾಲಾ​ ಅಮರ​ನಾಥ್​ ಅವರಿಗೆ ಸಲ್ಲುತ್ತದೆ. ಮಾಮೂಲಿ ಕ್ರೀಡಾಧಾರಿತ ಸಿನಿಮಾ ರೀತಿಯಲ್ಲಿ ಅವರ ಬದುಕಿನ ಕಥೆಯನ್ನು ಕಟ್ಟಿಕೊಡುವ ಬದಲು ಬೇರೆಯದೇ ಫ್ಲೇವರ್​ನಲ್ಲಿ ಈ ಸಿನಿಮಾವನ್ನು ನಿರ್ದೇಶಿಸಲು ರಾಜ್​ಕುಮಾರ್​ ಹಿರಾನಿ ಪ್ಲ್ಯಾನ್​ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ.

ಲಾಲಾ​ ಅಮರನಾಥ್​ ಬದುಕಿನ ವಿವರಗಳಿಂದ ರಾಜ್​ಕುಮಾರ್​ ಹಿರಾನಿ ಪ್ರೇರೇಪಿತರಾಗಿದ್ದಾರೆ. ಹಾಗಾಗಿ ‘ಡಂಕಿ’ ಸಿನಿಮಾ ಬಳಿಕ ಲಾಲಾ​ ಅಮರನಾಥ್​ ಬಯೋಪಿಕ್​ ಕೆಲಸಗಳು ಆರಂಭ ಆಗಲಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!