ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಮುಖಭಂಗ; ಬಿಜೆಪಿ ಅಭ್ಯರ್ಥಿಗಳು ಜಯಭೇರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾರಾಷ್ಟ್ರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿದಿದ್ದ ಮೂರು ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದು ಈ ಮೂಲಕ ಶಿವಸೇನೆ ನೇತೃತ್ವದ ʼಮಹಾ ವಿಕಾಸ ಅಗಾಡಿʼ ಸರ್ಕಾರಕ್ಕೆ ಭಾರೀ ಮುಖಭಂಗ ಎದುರಾಗಿದೆ.
ಮಹಾರಾಷ್ಟ್ರದಲ್ಲಿ 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ವಿರೋಧಪಕ್ಷ ಬಿಜೆಪಿಯು ರಾಜ್ಯದ ಆರು ರಾಜ್ಯಸಭಾ ಸ್ಥಾನಗಳಲ್ಲಿ ಮೂರನ್ನು ಕಸಿದುಕೊಂಡಿದೆ. ಬಿಜೆಪಿ ಮತ್ತು ಶಿವಸೇನೆ ಎರಡೂ ಕ್ರಾಸ್ ವೋಟಿಂಗ್ ಮತ್ತು ಚುನಾವಣಾ ನಿಯಮಗಳ ಉಲ್ಲಂಘನೆ ಆರೋಪಗಗಳನ್ನು ಮಾಡಿ ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದರಿಂದ, ಮತ ಎಣಿಕೆ ಕಾರ್ಯ ಸುಮಾರು ಎಂಟು ಗಂಟೆಗಳ ಕಾಲ ವಿಳಂಬವಾಗಿ ಇಂದು ಬೆಳಗ್ಗೆ ಫಲಿತಾಂಶಗಳನ್ನು ಘೋಷಿಸಲಾಯಿತು.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಮಾಜಿ ರಾಜ್ಯ ಸಚಿವ ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ ಮಹಾರಾಷ್ಟ್ರದಲ್ಲಿ ಗೆದ್ದು ರಾಜ್ಯಸಭೆ ಪ್ರವೇಶಿಸಿದ್ದಾರೆ. ಎಂವಿಎ ಮೈತ್ರಿಕೂಟದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿಗಳ ಪೈಕಿ ಶಿವಸೇನೆಯ ಸಂಜಯ್ ರಾವುತ್, ಎನ್‌ಸಿಪಿಯ ಪ್ರಫುಲ್ ಪಟೇಲ್ ಮತ್ತು ಕಾಂಗ್ರೆಸ್‌ನ ಇಮ್ರಾನ್ ಪ್ರತಾಪ್‌ಘರ್ಹಿ ಗೆಲುವು ಸಾಧಿಸಿದ್ದಾರೆ.”
ಈ ಚುನಾವಣೆಯಲ್ಲಿ ಬಿಜೆಪಿ 2, ಶಿವಸೇನೆ, ಕಾಂಗ್ರೆಸ್‌, ಎನ್‌ ಸಿಪಿ, ತಲಾ ಒಂದೊಂದು ಸ್ಥಾನ ಗೆಲ್ಲುವುದು ಖಚಿವಾಗಿತ್ತು. ಆದರೆ 6 ನೇ ಸ್ಥಾನ ಗೆಲುವಿಗೆ ಬಿಜೆಪಿಯ ಮಹಾದಿಕ್‌ ಹಾಗೂ ಶಿವಸೇನೆಯ ಸಂಜಯ್ ಪವಾರ್‌ ನಡುವೆ ನೇರ ಹಣಹಣಿ ಏರ್ಪಟ್ಟಿತ್ತು. ಈ ರೋಚಕ ಹಣಾಹಣಿಯಲ್ಲಿ ಮಹಾದಿಕ್‌ ಗೆಲುವು ಸಾಧಿಸಿದ್ದು ಮಹಾ ಸಿಎಂ ಉದ್ಧವ್‌ ಠಾಕ್ರೆ ತಂಡಕ್ಕೆ ಭಾರೀ ಹಿನ್ನಡೆ ಎದುರಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಟ-ರಾಜಕಾರಣಿ ಜಗ್ಗೇಶ್ ಮತ್ತು ಎಂಎಲ್‌ಸಿ ಲೆಹರ್ ಸಿಂಗ್ ಸಿರೋಯಾ ಅವರು ಬಿಜೆಪಿಯಿಂದ ಗೆದ್ದಿದ್ದಾರೆ, ಜೈರಾಮ್ ರಮೇಶ್ ಕಾಂಗ್ರೆಸ್‌ನ ಒಂದು ಸ್ಥಾನವನ್ನು ಗೆದ್ದಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗಳಿಸಿದರೆ, ಉಳಿದ ಒಂದು ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತು. ಹರಿಯಾಣದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಜೆಜೆಪಿ ಬೆಂಬಲಿತರು ಎರಡು ರಾಜ್ಯಸಭಾ ಸ್ಥಾನಗಳನ್ನು ಗೆದ್ದಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!