ಹೆಚ್ಚುವರಿ ಅಂಗಾಂಗದೊಂದಿಗೆ ಜನಿಸಿದ್ದ ಮಗುವಿನ ಶಸ್ತ್ರಚಿಕಿತ್ಸೆಗೆ ಹಣ ಒದಗಿಸಿ ಮಾನವೀಯತೆ ಮೆರೆದ ಸೋನು ಸೂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮ್ಮ ಮಾನವೀಯ ಕಾರ್ಯಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಬಹುಭಾಷಾನಟ ಸೋನು ಸೂದ್‌ ಈಗ ಮತ್ತೊಂದು ಸಾಮಾಜಿಕ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ.

ಬಿಹಾರದಲ್ಲಿ ಹೆಚ್ಚುವರಿ ಅಂಗಾಂಗದೊಂದಿಗೆ ಜನಿಸಿದ್ದ ಮಗುವಿನ ಶಸ್ತ್ರ ಚಿಕಿತ್ಸೆಗೆ ಹಣ ಒದಗಿಸಿ ಮಗುವಿನ ಬಾಳಿಗೆ ಬೆಳಕಾಗಿದ್ದಾರೆ. ಬಿಹಾರದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ್ದ ಚೌಮುಖಿ ಕುಮಾರಿ ಎಂಬ ಹೆಣ್ಣುಮಗು ಹುಟ್ಟುವಾಗಲೇ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿತ್ತು. ಮಗುವಿನ ಬೆಳವಣಿಗೆಗೆ ಈ ಹೆಚ್ಚುವರಿ ಅಂಗಾಂಗಗಳು ಅಡ್ಡಿಯುಂಟುಮಾಡಿದ್ದವು. ಕಡು ಬಡವರಾಗಿರುವ ಆಕೆಯ ಪಾಲಕರು ಶಸ್ತ್ರ ಚಿಕಿತ್ಸೆ ಮಾಡಿಸಲು ಹಣವಿಲ್ಲದೇ ದುಃಖಿತರಾಗಿದ್ದರು.

ಆದರೆ ಆಪತ್ಭಾಂದವನಂತೆ ಆಗಮಿಸಿದ ನಟ ಸೋನು ಸೂದ್‌ ಮಗುವಿನ ಚಿಕಿತ್ಸೆಗೆ ಅಗತ್ಯವಿರುವ ಹಣಸಹಾಯ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆಯ ಮೂಲಕ ಚೌಮುಖಿ ಕುಮಾರಿಯ ಹೆಚ್ಚುವರಿ ಅಂಗಗಳನ್ನು ತೆಗೆದುಹಾಕಲಾಗಿದೆ. ಈಗ ಬಾಲಕಿಯು ಚೇತರಿಸಿಕೊಳ್ಳುತ್ತಿದ್ದು ಆರೋಗ್ಯವಾಗಿದ್ದಾಳೆ ಎಂದು ಸೂದ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!