ವೀಕೆಂಡ್ ಕರ್ಫ್ಯೂಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ

ಹೊಸದಿಗಂತ ವರದಿ,ಕಲಬುರಗಿ:

ಸೆಮಿಲಾಕ್‌ಡೌನ್ ಹಾಗೂ ವಿಕೆಂಡ್ ಕರ್ಫ್ಯೂಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತ ಪಡಿಸಿ, ಈ ಹಿಂದೆ ಸರ್ಕಾರಗಳ ಎಡಬಿಡಂಗಿ ನಿರ್ಧಾರಗಳಿಂದ‌ ಬಡ ಮಧ್ಯಮ ವರ್ಗದ ಜನ ಎಲ್ಲವನ್ನ ಕಳೆದುಕೊಂಡು ಬೀದಿಗೆ ಬೀದಿದ್ದಾರೆ ಎಂದು ಹೇಳಿದರು

ನಗರದ ಲುಂಬಿನಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ನಂತರ ಲಾಕ್‌ಡೌನ್ ಆದರೂ ಮಾಡಿ, ಏನಾದರೂ ಮಾಡಿ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.

ಕೋವಿಡ್ ಇದೀಗ ಕಾಂಟ್ರೋವರ್ಸಿ ವಿಚಾರವಾಗಿದೆ, ಏನಾದರು ಮಾತಾಡಿದರೇ, ತಪ್ಪಾಗುತ್ತದೆ. ಲಾಸ್ಟ್ ಟೈಮ್ ಸಡನ್ ಆಗಿ ಲಾಕ್‌ಡೌನ್ ಮಾಡಿದಾಗ ಸಾಕಷ್ಟು ತೊಂದರೆಯಾಗಿತ್ತು. ಲಾಕ್‌ಡೌನ್‌ನಿಂದ ಬೀದಿಗೆ ಬಿದ್ದಿದ್ದ ಜನರಿಗೆ ಕೇಂದ್ರ ಸರ್ಕಾರ ನೆರವು ನೀಡಿಲ್ಲ ಎಂದ ಅವರು, ಕಾರ್ಮಿಕರ ನಿಧಿ ಹಣ ಕಾರ್ಮಿಕರಿಗೂ ಸಹ ನೀಡದೇ ಇರೋದು ದುರಂತದ ವಿಚಾರ ಎಂದು ಹೇಳಿದರು.

ಈಗಲೂ ಕೂಡ ಸಡನ್ ಆಗಿ ಲಾಕ್‌ಡೌನ್ ಮಾಡಿದರೆ, ದೇಶದ ,ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ಬಿಳಲಿದೆ. ಈ ಹಿಂದೆ ಕೇಂದ್ರದ ಎಡಬಿಡಂಗಿ ನಿರ್ಧಾರಗಳಿಂದ ವಿಶ್ವದಲ್ಲಿ ದೇಶದ ಆರ್ಥಿಕ ಗುಣಮಟ್ಟ ಪಾತಾಳಕ್ಕೆ ಕುಸಿದಿತ್ತು. ಬಡ, ಮಧ್ಯ‌ಮ ವರ್ಗದ ಜನರು ಎಲ್ಲವನ್ನ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ ಎಂದರು.

ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಲಾಕ್‌ಡೌನ್ ಮಾಡೋದು ಸರಿಯಲ್ಲ, ಎಲ್ಲದರ ಬಗ್ಗೆ ಚಿಂತನ ಮಂಥನ ಮಾಡಿ ಲಾಕ್‌ಡೌನ್ ಜಾರಿ ಮಾಡಬೇಕು. ಯಾವ ಯಾವ ವಲಯಗಳಿಗೆ ರಿಯಾಯಿತಿ ಕೊಡಬೇಕು ಎನ್ನುವುದು ನಿರ್ಧರಿಸಬೇಕು ಎಂದರು.

ಕೋವಿಡ್‌ನಿಂದ ಮೃತಪಟ್ಟವರ ಕುರಿತು ಕೇಂದ್ರ ಸರ್ಕಾರ ಬೋಗಸ್ ರಿಪೋಟ್೯ ನೀಡಿದೆ. ಕೋವಿಡ್ ವಿಚಾರವಾಗಿ ಕೇಂದ್ರ ಸರ್ಕಾರ ಸಿಂಪತಿ ಕ್ರಿಯೆಟ್ ಮಾಡಿ ಭರ್ಜರಿ ಪ್ರಚಾರ ಪಡೆಯುತ್ತಿದೆ ಎಂದು ವಾಗ್ಧಾಳಿ ನಡೆಸಿದ ಖರ್ಗೆ, ಉತ್ತರ ಪ್ರದೇಶದಲ್ಲಿ ಸತರೇ,ಹೆಣ ಸುಡುವುದಕ್ಕೆ ಕಟ್ಟಿಗೆ ಸಿಕ್ಕಿಲ್ಲ, ಹುಳುವುದಕ್ಕೆ ಜಮೀನು ಸಿಕ್ಕಿಲ್ಲ, ರಾಶಿ ರಾಶಿ ಹೆಣಗಳನ್ನು ಗಂಗಾ ನದಿಯಲ್ಲಿ ಬಿಸಾಕಿದ್ದು ಇದಕ್ಕೆ ಸಾಕ್ಷಿ ಎಂದರು.

ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್‌ಡೌನ್ ಆದರೂ ಮಾಡಿ ಏನಾದರು ಮಾಡಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!