#ರಾಜ್ಯೋತ್ಸವ-ರಾಷ್ಟ್ರೋತ್ಸವ: ಟ್ವೀಟರ್‌ ನಲ್ಲಿ ಪಸರಿಸಿದ ಕನ್ನಡದ ಕಂಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕನ್ನಡ ನಾಡು ನುಡಿಯ ಸ್ಮರಣೆಯ ಕರ್ನಾಟಕ ರಾಜ್ಯೋತ್ಸವದ ಶುಭದಿನವಾದ ಇಂದು ನಾಡಿನೆಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ.
ಮೈಸೂರು ರಾಜ್ಯವು 1956ರ ನವೆಂಬರ್‌ 1 ರಂದು ಕರ್ನಾಟಕವಾಗಿ ಬದಲಾದ ಶುಭದಿನದ ಸ್ಮರಣೆಗಾಗಿ ಅಂದಿನಿಂದಲೂ ನಂವೆಂಬರ್‌ 1 ನ್ನು ಕರ್ನಾಟಕ ರಾಜ್ಯೋತ್ಸವ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಇಂದು ನಾಡಿನ ಶ್ರೇಷ್ಠ ಪರಂಪರೆಯ ಸ್ಮರಣೆ ಮಾಡುತ್ತ ಅನೇಕ ರೀತಿಯಲ್ಲಿ ರಾಜ್ಯೋತ್ಸವದ ಆಚರಣೆ ನಡೆಸಲಾಗುತ್ತಿದೆ. ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಶ್ರೇಷ್ಠಭಾಷೆ ಕನ್ನಡದ ಹಿರಿಮೆಯನ್ನು ಜಗತ್ತಿಗೇ ಸಾರುವ ಕೆಲಸವಾಗುತ್ತಿದೆ. ದೇಶ ವಿದೇಶಗಳಲ್ಲಿರುವ ಕನ್ನಡಿಗರಷ್ಟೇ ಅಲ್ಲದೇ ಕನ್ನಡದ ಮೇಲೆ ಪ್ರೀತಿ ಅಭಿಮಾನ ಹೊಂದಿರುವ ಇತರ ಭಾಷಿಗರೂ ಸಹ ರಾಜ್ಯೋತ್ಸವದ ಶುಭಾಶಯ ಕೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟರ್‌ ನಲ್ಲಿಯೂ ಕನ್ನಡದ ಕಂಪು ಪಸರಿಸುತ್ತಿದೆ. #ರಾಜ್ಯೋತ್ಸವ-ರಾಷ್ಟ್ರೋತ್ಸವ ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ. ಈ ಟ್ರೆಂಡ್‌ ನಲ್ಲಿ ಕೆಲ ಆಯ್ದ ಟ್ವೀಟ್‌ ಗಳು ನಿಮಗಾಗಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!