ಉಗಾಂಡಾದಲ್ಲಿ ಭಾರತೀಯ ಉದ್ಯಮಿಗೆ ಗುಂಡು ಹಾರಿಸಿ ಹತ್ಯೆಗೈದ ಪೊಲೀಸ್‌ ಕಾನ್ಸ್ಟೇಬಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಗಾಂಡಾದ ಕಿಸೊರೊ ಪಟ್ಟಣದಲ್ಲಿ 24 ವರ್ಷದ ಪ್ರಾಯದ ಭಾರತೀಯ ಉದ್ಯಮಿಯೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೃತನನ್ನು ಕುಂತಾಜ್ ಪಟೇಲ್ ಎಂದು ಗುರುತಿಸಲಾಗಿದೆ.
ಫೀಲ್ಡ್ ಫೋರ್ಸ್ ಯುನಿಟ್ (ಎಫ್‌ಎಫ್‌ಯು) ದ ಪೊಲೀಸ್ ಪೇದೆ ಎಲಿಯೊಡಾ ಗುಮಿಜಮು ಕೊಲೆ ಆರೋಪಿಯಾಗಿದ್ದು, ಆತ ಅಪರಾಧದ ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಬೆನ್ನಟ್ಟಿದ ಜನರು ಆತನನ್ನು  ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಡೈಲಿ ಮಾನಿಟರ್ ಪತ್ರಿಕೆ ವರದಿ ಮಾಡಿದೆ.
ಆರೋಪಿಯು ಇತರ ಕೆಲ ವ್ಯಕ್ತಿಗಳೊಂದಿಗೆ, ಹಾರ್ಡ್‌ವೇರ್ ವ್ಯವಹರ ನಡೆಸುತ್ತಿದ್ದ ಭಾರತೀಯ ಅಂಗಡಿಗೆ ನುಗ್ಗಿಭಾರತೀಯ ಉದ್ಯಮಿಯ ಎದೆಗೆ ಗುಂಡು ಹಾರಿಸಿದ್ದಾರೆ ಎಂದು ಪ್ರಾದೇಶಿಕ ಪೊಲೀಸ್ ವಕ್ತಾರ ಎಲ್ಲಿ ಮಾತೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!