Tuesday, March 28, 2023

Latest Posts

ಪತಿ ಅರೆಸ್ಟ್ ಆದಂತೆ ತಲೆ ತಿರುಗಿ ಬಿದ್ದ ರಾಖಿ, ಹೈಡ್ರಾಮಾ ನಿಲ್ಸಿ, ಸಾಕಾಯ್ತು ಅಂತಿದ್ದಾರೆ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಾಖಿ ಸಾವಂತ್ ಹಾಗೂ ಉದ್ಯಮಿ ಆದಿಲ್ ಖಾನ್ ದಾಂಪತ್ಯ ಜೀವನ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪತಿ ಮೋಸ ಮಾಡಿದ್ದಾನೆ, ಇನ್ನೊಬ್ಬಳ ಜತೆ ಸಂಬಂಧ ಹೊಂದಿದ್ದಾನೆ ಎಂದು ರಾಖಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆದಿಲ್‌ನ್ನು ವಶಕ್ಕೆ ಪಡೆದಿದ್ದಾರೆ.

ಇದೀಗ ರಾಖಿ ತಲೆ ತಿರುಗಿ ಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದ್ದು, ಪತಿ ಅರೆಸ್ಟ್ ಆದ ಶಾಕ್‌ನಲ್ಲಿ ರಾಖಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ತಾನೇ ಕಂಪ್ಲೆಂಟ್ ಕೊಟ್ಟಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಶಾಕ್ ಆಗೋದು ಏನಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ರಾಖಿ ಮಧ್ಯರಾತ್ರಿ ಮಾಧ್ಯಮದವರ ಮುಂದೆ ಬಂದು, ತನಗಾದ ಮೋಸದ ಬಗ್ಗೆ ಮಾತನಾಡಿದ್ದಾರೆ. ಆದಿಲ್ ತಾಯಿ, ನನ್ನ ಅತ್ತೆಗೆ ಆದಿಲ್ ಎರಡನೇ ಸಂಬಂಧದ ಬಗ್ಗೆ ತಿಳಿಸಿ, ವಿಡಿಯೋ ಕಳಿಸಿದೆ. ಅದಕ್ಕೆ ಅವರು ಡಿವೋರ್ಸ್ ಕೊಟ್ಟುಬಿಡು ಎಂದಿದ್ದಾರೆ. ಮದುವೆಯಾದ ಮೇಲೆ ದೂರಾಗೋಕೆ ಹೇಗೆ ಸಾಧ್ಯ ಎಂದು ರಾಖಿ ಕಣ್ಣೀರಿಟ್ಟಿದ್ದಾರೆ.

ನನ್ನ ಮಗ ಮಾಡ್ತಿರೋದು ತಪ್ಪು, ನಿನ್ನ ಜಾಗದಲ್ಲಿ ನಾನು ಇದ್ದಿದ್ರೆ ಡಿವೋರ್ಸ್ ಕೊಡ್ತಿದೆ ಎಂದು ನನ್ನ ಅತ್ತೆ ಹೇಳಿದ್ದಾರೆ, ಮುಂಬೈಗೆ ಬಂದ ಮೇಲೆ ಆದಿಲ್ ಬದಲಾಗಿದ್ದಾನೆ ಎಂದು ರಾಖಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ತಲೆ ಸುತ್ತು ಬಂದು ಬಿದ್ದರೂ ಮೇಕಪ್ ಹಾಳಾಗಿಲ್ಲ, ಕೈಯಲ್ಲಿದ್ದ ಮೊಬೈಲ್ ಪರ್ಸ್ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಇದೆಲ್ಲಾ ಡ್ರಾಮಾ ಎಂದು ನೆಟ್ಟಿಗರು ಹೇಳಿದ್ದಾರೆ.

https://www.instagram.com/reel/CoXeeORjoJU/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!