Saturday, April 1, 2023

Latest Posts

ಗ್ರಾಹಕರಿಗೆ ಮತ್ತೊಂದು ಬರೆ: ರೆಪೋ ದರ ಹೆಚ್ಚಿಸಿದ ಆರ್‌ಬಿಐ, ಸಾಲದ ಮೇಲಿನ ಬಡ್ಡಿಗೆ ಜನ ಸುಸ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೊಮ್ಮೆ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಬಡ್ಡಿದರಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. 2023ನೇ ಸಾಲಿನ ಮೊದಲ ಹಣಕಾಸು ನೀತಿ ಪರಾಮರ್ಶೆ ಸಭೆಯು ಮಂಗಳವಾರ ನಡೆಯಿತು. ಈ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಸಭೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಆರ್‌ಬಿಐ ರೆಪೊ ದರದಲ್ಲಿ (ನೀತಿ ದರಗಳು) 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳವನ್ನು ಪ್ರಕಟಿಸಿದೆ. ಇದರೊಂದಿಗೆ ರೆಪೋ ದರ ಶೇ.6.50ಕ್ಕೆ ತಲುಪಿದೆ. ಆರ್‌ಬಿಐನ ಇತ್ತೀಚಿನ ನಿರ್ಧಾರದಿಂದ ಎಲ್ಲಾ ರೀತಿಯ ಬಡ್ಡಿದರಗಳು ಹೆಚ್ಚಾಗುವ ಸಾಧ್ಯತೆಯಿದೆ.

ರಿಸರ್ವ್ ಬ್ಯಾಂಕ್ ಸತತ ಆರನೇ ಬಾರಿಗೆ ರೆಪೊ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇತ್ತೀಚಿನ ಹೆಚ್ಚಳದೊಂದಿಗೆ, ರೆಪೋ ದರ 6.25 ಶೇಕಡಾದಿಂದ ಈಗ 6.50ಕ್ಕೆ ಏರಿದೆ. ರೆಪೋ ದರ ಹೆಚ್ಚಳದಿಂದಾಗಿ ಗೃಹ ಸಾಲ, ವಾಹನ ಮತ್ತು ವೈಯಕ್ತಿಕ ಸಾಲಗಳಿಂದ ಹಿಡಿದು ಎಲ್ಲದರ ಮೇಲಿನ ಬಡ್ಡಿ ದರಗಳು ಹೆಚ್ಚಾಗಲಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ಬಡ್ಡಿದರವನ್ನು ಶೇ.5.90ರಿಂದ ಶೇ.6.25ಕ್ಕೆ ಹೆಚ್ಚಿಸಲಾಗಿತ್ತು. ಆರ್‌ಬಿಐ ಕಳೆದ ವರ್ಷದಿಂದ ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಒಟ್ಟು ಶೇ.2.50ರಷ್ಟು ಏರಿಕೆಯಾಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಹಣದುಬ್ಬರದ ಬಗ್ಗೆ ತಮ್ಮ ಭವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಹಣದುಬ್ಬರವು 2024 ರಲ್ಲಿ ಶೇಕಡಾ ನಾಲ್ಕು ಮೀರುತ್ತದೆ ಮತ್ತು ನಿಜವಾದ ಡಿಜಿಪಿ 2023-24 ರಲ್ಲಿ ಶೇಕಡಾ 6.4 ಕ್ಕೆ ತಲುಪಬಹುದು ಎಂಬುದಾಗಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!