CINE | ರಹಸ್ಯವಾಗಿ ಮತ್ತೊಂದು ಮದುವೆಯಾದ ರಾಖಿ ಸಾವಂತ್ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಾಖಿ ಸಾವಂತ್ ಪತಿ, ಮೈಸೂರಿನ ಆದಿಲ್ ಖಾನ್ ಇದೀಗ ರಹಸ್ಯವಾಗಿ ಮತ್ತೊಂದು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಆದಿಲ್ ಐದು ದಿನಗಳ ಹಿಂದೆ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ಸೋಮಿ ಖಾನ್ ಅವರನ್ನು ಮದುವೆ ಆಗಿದ್ದಾರೆ ಎಂದು ಹೇಳಲಾಗಿದೆ. ಆಪ್ತರೊಂದಿಗೆ ಸಿಂಪಲ್ ಆಗಿ ಮದುವೆಯಾಗಿದ್ದು, ಕೆಲವು ತಿಂಗಳ ಪ್ರೀತಿ ನಂತರ ಮದುವೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಖಿ ಸಾವಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೆಲ ದಿನಗಳ ಹಿಂದಷ್ಟೇ ಆದಿಲ್ ಖಾನ್ ಮೋಸ ಮಾಡಿದ್ದಾರೆ, ಮುಸ್ಲಿಂ ಆಗಿ ಮತಾಂತರಗೊಂಡರೂ ಅವರ ಮನೆಯವರು ನನ್ನನ್ನು ಒಪ್ಪುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಹೈ ಡ್ರಾಮಾ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!