RECIPE | ಎಂದಾದರೂ ಪಿಂಕ್ ಮೊಮೊಸ್ ಟ್ರೈ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಂದಾದರೂ ಬೀಟ್ರೊಟ್ ಮೊಮೊಸ್ ಟೇಸ್ಟ್ ಮಾಡಿದ್ದೀರಾ, ಇಲ್ಲ ಅನ್ನೋದಾದರೆ ಇವತ್ತೇ ಟ್ರೈ ಮಾಡಿ ಮನೆಮಂದಿ ಜೊತೆ ಕೂತು ಸವಿಯಿರಿ.

BEETROOT MOMOS | Vegetable Momos are a popular snack prepare… | Flickr

ಬೀಟ್ರೂಟ್ ಮೊಮೊಸ್ ಗೆ ಬೇಕಾಗುವ ಪದಾರ್ಥಗಳು:

ಗೋದಿ ಹಿಟ್ಟು- 1 ಕಪ್

ಬೀಟ್ರೂಟ್-1

ವಿನೆಗರ್-1 ಚಮಚ

ಕ್ಯಾಬೇಜ್-1 ಕಪ್

ಈರುಳ್ಳಿ-1

ಕೊತ್ತಂಬರಿ ಸೊಪ್ಪು-1/4 ಕಪ್

ಹಸಿಮೆಣಸಿನಕಾಯಿ ಪೇಸ್ಟ್-1 ಚಮಚ

ಶುಂಠಿ ಪೇಸ್ಟ್-1 ಚಮಚ

ಉಪ್ಪು-ರುಚಿಗೆ

ಎಣ್ಣೆ-5 ಚಮಚ

Beetroot momos Recipe by Suchitra S(Radhika S) - Cookpad

ಬೀಟ್ರೂಟ್ ಮೊಮೊಸ್ ಮಾಡುವ ವಿಧಾನ:

ಮೊದಲು, ಬೀಟ್ರೂಟ್ ಗಳನ್ನು ಬೇಯಿಸಿ, ಕಡಿಮೆ ನೀರನ್ನು ಹಾಕಿ ಬೇಯಿಸಿ ನಂತರ ನೀರು ಹಾಕದೇ ನುಣ್ಣಗೆ ರುಬ್ಬಿ.

ಬೀಟ್ರೂಟ್ ಪ್ಯೂರಿಗೆ ವಿನೆಗರ್ ಸೇರಿಸಿ ಮತ್ತು ಬೆರೆಸಿ. ಈಗ ಸ್ವಲ್ಪ ಗೋದಿ ಹಿಟ್ಟಿಗೆ ಬೀಟ್ರೂಟ್ ರಸ, ಉಪ್ಪು, ಬಿಸಿ ನೀರು ಹಾಕಿ ಹಿಟ್ಟು ಕಲೆಸಿಕೊಂಡು ಸ್ವಲ್ಪ ಎಣ್ಣೆ ಸವರಿ ಉಂಡೆಗಲನಾಗಿ ತಯಾರಿಸಿ.

ಸ್ಟಪಿಂಗ್ ಗಾಗಿ ಕ್ಯಾಬೇಜ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪೇಸ್ಟ್ ಶುಂಠಿ ಪೇಸ್ಟ್ ,ಉಪ್ಪು ಸೇರಿಸಿ ತಯಾರಿಸಿದ ಗೋದಿ ಹಿಟ್ಟಿನ ಉಂಡೆಗಳನ್ನು ಲಟ್ಟಿಸಿಕೊಂಡು ಈ ಮಿಶ್ರಣವನ್ನು ಸೇರಿಸಿ ಮೊಮೊಸ್ ತಯಾರಿಸಿಕೊಳ್ಳಿ.

ಇದೀಗ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಮೊಮೊಸ್ ಗಳನ್ನು ಹತ್ತು ನಿಮಿಷಗಳ ಕಾಲ ಬೇಯಿಸಿ. ಇದು ಬೆಂದ ನಂತರ ಮೊಮೊಸ್ ಗಳನ್ನು ಚಟ್ನಿ ಮತ್ತು ಸಾಸ್ ಜೊತೆಗೆ ಒಂದು ಪ್ಲೇಟ್ ಗೆ ಹಾಕಿ ಮನೆಯವರ ಜೊತೆ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!