21 ಜವಾನರ ಚಿತ್ರವಿರುವ 27 ಅಡಿ ರಾಖಿ ರೆಡಿ: ರಕ್ಷಣಾ ಕವಚದಂತಿರುವ ಸೈನಿಕರಿಗೆ ಅರ್ಪಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಖಿ ಹಬ್ಬ ಹತ್ತಿರದಲ್ಲಿದೆ, ಎಲ್ಲಾ ಮನೆಗಳಲ್ಲೂ ಅಕ್ಕ-ತಂಗಿಯರು ಸಹೋದರರಿಗೆ ರಾಖಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ. ಹಿಂದು ನಂಬಿಕೆ ಪ್ರಕಾರ ಸಹೋದರರ ರಕ್ಷೆಯನ್ನು ಶ್ರೀರಾಮನ ರಕ್ಷೆ ಎಂದು ಭಾವಿಸಲಾಗುತ್ತದೆ. ಬಂಧಗಳ ಪ್ರತೀಕವಾಗಿರುವ ರಕ್ಷಾಬಂಧನದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ದೇಶಾದ್ಯಂತ ರಕ್ಷಾ ಬಂಧನ ಹಬ್ಬದ ಕಳೆಯಿದ್ದು ಈ ತಿಂಗಳ 30ರಂದು ಆಚರಿಸಲಾಗುತ್ತದೆ. ದೇಶಕ್ಕೆ ರಕ್ಷಾ ಕವಚವಾಗಿ ನಿಂತಿರುವ ಭಾರತೀಯ ಸೈನಿಕರಿಗೆ ರಾಖಿ ಕಟ್ಟಲು ಭಾರತೀಯ ಹೆಣ್ಣುಮಕ್ಕಳು ಎದುರು ನೋಡುತ್ತಾರೆ. ತ್ಯಾಗ ಬಲಿದಾನದ ಪ್ರತೀಕವಾಗಿ ನಿಂತಿರುವ ವೀರ ಸೈನಿಕರಿಗಾಗಿ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಸಾಯಿಮೌಳಿ ದೇವಸ್ಥಾನ ಸಮಿತಿಯಿಂದ ವಿಶೇಷ ರಾಖಿ ತಯಾರಿಸಲಾಗುತ್ತಿದೆ.

ಈ ವಿಶಿಷ್ಟ ರಾಖಿಗಳ ಪ್ರತಿಯೊಂದು ಇಂಚುಗಳನ್ನು ಮಹತ್ವದಿಂದ ಕೂಡಿದೆ. ಈ ರಾಖಿಯ ಉದ್ದ 27 ಅಡಿ, 6 ಅಡಿ ಅಗಲ. ಇದಲ್ಲದೆ ಈ ವಿಶಿಷ್ಟ ರಾಖಿಯಲ್ಲಿ 21 ವೀರಜವಾನರ ಚಿತ್ರಗಳಿವೆ. ಇವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಚಿತ್ರಗಳನ್ನು ಕೂಡ ಜೋಡಿಸಲಾಗಿತ್ತು. ಇದರ ಜೊತೆಗೆ ಪರಮವೀರ ಚಕ್ರ ವಿಜೇತರ ಫೋಟೋಗಳನ್ನು ಕೂಡ ಮುದ್ರಿಸಲಾಗಿದೆ. ಸಾಯಿಮೌಳಿ ದೇವಸ್ಥಾನ ಸಮಿತಿಯು ಈಗಾಗಲೇ ಈ ಬೃಹತ್ ರಾಖಿಯನ್ನು ಪಂಜಾಬ್‌ನ ಉಧಮ್‌ಪುರಕ್ಕೆ ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿ ಬಿಲಾಸ್‌ಪುರದ ಅಧಿಕಾರಿಗಳ ಮೂಲಕ ರವಾನಿಸಿದೆ.

ಈ ಭಾರಿ ಸಿದ್ಧತೆ ಕುರಿತು ಸಮಿತಿಯ ಸಂಯೋಜಕ ದಿಲೀಪ್ ದೇವರ್ಕರ್ ಮಾತನಾಡುತ್ತಾ.. ಸುರಕ್ಷಿತವಾಗಿರಬೇಕೆಂಬ ಉದ್ದೇಶದಿಂದ ಈ ವಿಶೇಷ ರಾಖಿ ತಯಾರಿಸಿದ್ದಾರೆ. 2022ರಲ್ಲಿ ಎರಡೂವರೆ ಅಡಿ ಅಗಲ ಹಾಗೂ 15 ಅಡಿ ಅಗಲದ ರಾಖಿ ತಯಾರಿಸಿ ಲಢಾಕ್‌ಗೆ ಕಳುಹಿಸಲಾಗಿತ್ತು ಎಂದರು.

ತ್ರಿವರ್ಣದಲ್ಲಿ ರಚಿಸಿರುವ ಈ ಬೃಹತ್ ರಾಖಿ ದೇಶ ಭಕ್ತಿ ಮತ್ತು ದೇಶದ ರಕ್ಷಣೆಯ ಸಂಕೇತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!