CINE | ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಗೆ ಚಿತ್ರೋತ್ಸವ ಪ್ರಶಸ್ತಿ ಪ್ರದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ನಡೆದ ಇನ್ನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವಾರ್ಡ್ ಪಡೆದುಕೊಂಡಿದ್ದಾರೆ.

ಐಕಾನಿಕ್ ಡೈರೆಕ್ಟರ್ ಆಗಿ ರಿಷಬ್, ಟ್ರೆಂಡಿಂಗ್ ಆಕ್ಟರ್ ಆಗಿ ರಕ್ಷಿತ್ ಶೆಟ್ಟಿ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ರಿಷಬ್ ಶೆಟ್ಟಿಗೆ ಕಾಂತಾರ ಲಕ್ಕಿ ಸಿನಿಮಾವಾಗಿದ್ದು, ಏಕಾಏಕಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ಇತ್ತ ರಕ್ಷಿತ್ ಶೆಟ್ಟಿ ಚಾರ್ಲಿ ಸಿನಿಮಾದಿಂದ ನಟನಾಗಿ, ನಿರ್ದೇಶಕನಾಗಿ ಗೆಲುವು ಸಾಧಿಸಿದ್ದಾರೆ. ಇದು ಕನ್ನಡಿಗರ ಗೆಲುವು, ಕನ್ನಡಿಗರ ಪ್ರೀತಿಯಿಂದ ನಾನು ಬೇರೆ ಭಾಷೆಯಲ್ಲಿಯೂ ಚಿರಪರಿಚಿತನಾಗಿದ್ದೇನೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ನನ್ನ ಕರಿಯರ್‌ನಲ್ಲೇ ಚಾರ್ಲಿ ಅದ್ಭುತ ಸಿನಿಮಾ, ಪರಂವಾ ಸ್ಟುಡಿಯೋಸ್‌ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ, ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಖುಷಿಯಾಗಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!